ಶ್ರೀನಗರ, ಜಮ್ಮು ಕಾಶ್ಮೀರ:ಸಿಆರ್ಪಿಎಫ್ ಬಂಕರ್ ಬಳಿ ಅಪರಿಚಿತ ಉಗ್ರರು ಎಸೆದ ಗ್ರೆನೇಡ್ ಸ್ಫೋಟಗೊಂಡು ಓರ್ವ ಯೋಧ ಗಾಯಗೊಂಡಿರುವ ಘಟನೆ ಕುಪ್ವಾರಾ ಜಿಲ್ಲೆಯ ಹಂದ್ವಾರಾ ಬಳಿಯ ಲ್ಯಾನ್ಗೇಟ್ ಪ್ರದೇಶದಲ್ಲಿ ನಡೆದಿದೆ.
ಇಂಥದ್ಧೇ ಮತ್ತೊಂದು ಪ್ರಕರಣ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಆಜಾದ್ಗಂಜ್ ಪ್ರದೇಶದಲ್ಲಿ ನಡೆದಿದೆ. ಉಗ್ರರು ಸಿಆರ್ಪಿಎಫ್ ಬಂಕರ್ ಮೇಲೆ ಗ್ರೆನೇಡ್ ಎಸೆದು ಪರಾರಿಯಾಗಿದ್ದು, ಈ ವೇಳೆ ಒಂದು ಟವೇರಾ ವಾಹನಕ್ಕೂ ಹಾನಿಯಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.