ಬೆಂಗಳೂರು: ಈ ನವೆಂಬರ್‌ನಲ್ಲಿ ದೇಶದ ದಕ್ಷಿಣದ ಮೂರು ಪ್ರಮುಖ ನಗರಗಳಲ್ಲಿ (ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ) ಗಾಳಿಯ ಗುಣಮಟ್ಟವು ನವೆಂಬರ್ 2019ಕ್ಕೆ ಹೋಲಿಸಿದರೆ ಉತ್ತಮವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಮಾಹಿತಿಯನ್ನು ಇತ್ತೀಚೆಗೆ ಗ್ರೀನ್‌ಪೀಸ್ ಇಂಡಿಯಾ ಬಹಿರಂಗಪಡಿಸಿದೆ.
ಗುಣಮಟ್ಟ ಪಿಎಂ(ಪಾರ್ಟಿಕ್ಯುಲೇಟೆಡ್ ಮ್ಯಾಟರ್ 2.5ಗೆ ಇಳಿಕೆಯಾಗಿದ್ದು, ಹೊರಸೂಸುವಿಕೆಯ ಮಿತಿ ಶೇ.16 ರಿಂದ 37 ರವರೆಗಿದೆ. ಆದ್ರೆ ಈ ಮೂರು ನಗರಗಳಲ್ಲಿ ಗಾಳಿಯ ಗುಣಮಟ್ಟ WHO ಮಾನದಂಡಗಳಿಗೆ ಹೋಲಿಸಿದರೆ (25μg / m3) ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಈ ನವೆಂಬರ್‌ನಲ್ಲಿ ದಾಖಲಾದ ಪಿಎಂ 2.5 ರ ಸರಾಸರಿ ಸಾಂದ್ರತೆಯು 2019 ರ ನವೆಂಬರ್‌ನಲ್ಲಿ 40.33μg / m3 ಗೆ ಹೋಲಿಸಿದರೆ 33.49μg / m3 ಇತ್ತು. ಪಿಎಂ 2.5 ನ ಸರಾಸರಿ ಸಾಂದ್ರತೆಯು ಶೇ.16.96 ರಷ್ಟು ಕಡಿಮೆಯಾಗಿದೆ. ಬಾಪುಜಿ ನಗರ ಮತ್ತು ಜಯನಗರ ಕ್ರಮವಾಗಿ 42μg / m3 ಮತ್ತು 39μg / m3 ಹೊಂದಿದ್ದು, ಪಿಎಂ 2.5 ಸಾಂದ್ರತೆಯೊಂದಿಗೆ ಹಾಟ್‌ಸ್ಪಾಟ್‌ಗಳಾಗಿ ಉಳಿದಿದೆ. ವಿಶ್ಲೇಷಣೆಯ ಪ್ರಕಾರ, 2020 ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಕೇವಲ 12 ದಿನಗಳಲ್ಲಿ ಮಾತ್ರ ಈ ಸಾಂದ್ರತೆ ದಾಖಲಾಗಿದೆ. ಅಲ್ಲಿ ಪಿಎಂ 2.5 ಸಾಂದ್ರತೆಯು ನಿಗದಿತ WHO ಮಾನದಂಡಗಳ ಅಡಿಯಲ್ಲಿ ಉಳಿದಿದೆ.
ಹೈದರಾಬಾದ್‌ನಲ್ಲಿ ಪಿಎಂ 2.5 ನ ಸರಾಸರಿಯ ಸಾಂದ್ರತೆಯು ಶೇ.17.88ರಷ್ಟು ಕಡಿಮೆಯಾಗಿದೆ. ಕಳೆದ ತಿಂಗಳು ಇದೇ ಅವಧಿಯಲ್ಲಿ 68.58μg / m3 ಗೆ ಹೋಲಿಸಿದರೆ ಈ ನವೆಂಬರ್‌ನಲ್ಲಿ ಪಿಎಂ 2.5 ರ ಸರಾಸರಿ ಸಾಂದ್ರತೆಯು 56.32μg / m3 ಆಗಿತ್ತು. ಸನತ್‌ನಗರ ಮತ್ತು ಝೂ ಪಾರ್ಕ್‌ನಲ್ಲಿ ವಾಯು ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರ ಗರಿಷ್ಠ ಸರಾಸರಿ ಪಿಎಂ 2.5 ನನ್ನು ದಾಖಲಿಸಿದೆ. ಇಡೀ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಒಂದು ದಿನ ಈ ಸಾಂದ್ರತೆ ದಾಖಲಾಗಿದೆ. ಅಲ್ಲಿ ನಗರದ ಗಾಳಿಯ ಗುಣಮಟ್ಟವು ನಿಗದಿತ ಪಿಎಂ 2.5 WHO ಮಾನದಂಡಕ್ಕೆ ಹೊಂದಿಕೆಯಾಗುತ್ತದೆ.