ಕರ್ನಾಟಕ

karnataka

ETV Bharat / bharat

ಹೋಟೆಲ್​ನಲ್ಲಿ ವೇಶ್ಯಾವಾಟಿಕೆ: 23 ಮಂದಿ ಬಂಧನ - ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 23 ಮಂದಿ ಬಂಧನ

ಹೋಟೆಲ್​ವೊಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 23 ಮಂದಿಯನ್ನು ಉತ್ತರಪ್ರದೇಶದ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ಹೋಟೆಲ್​ನಲ್ಲಿ ವೇಶ್ಯಾವಾಟಿಕೆ
ಹೋಟೆಲ್​ನಲ್ಲಿ ವೇಶ್ಯಾವಾಟಿಕೆ

By

Published : Mar 21, 2021, 10:06 AM IST

ಗ್ರೇಟರ್​ ನೋಯ್ಡಾ (ಉತ್ತರಪ್ರದೇಶ): ನೋಯ್ಡಾದ ಡಂಕೌರ್​ನ ಹೋಟೆಲ್​ವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 23 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಲ್ಲಿ 12 ಜನ ಮಹಿಳೆಯರು ಮತ್ತು 11 ಮಂದಿ ಪುರುಷರಿದ್ದಾರೆ. ಹೋಟೆಲ್​ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಉತ್ತರ ಪ್ರದೇಶ ಪೊಲೀಸರು ನಿನ್ನೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಸ್ಥಳೀಯ ಪೊಲೀಸರು ಸಹ ಇದಕ್ಕೆ ಸಾಥ್​ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಪೊಲೀಸ್ ಕಾನ್ಸ್​ಟೇಬಲ್, ಓರ್ವ ಹೆಡ್​ ಕಾನ್ಸ್​ಟೇಬಲ್ ಮತ್ತು ಸ್ಥಳೀಯ ಪೊಲೀಸ್ ವ್ಯಾನ್‌ ಚಾಲಕನ ಹೆಸರು ತಳುಕುಹಾಕಿಕೊಂಡಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಆರ್​.ಕೆ. ಸಿಂಗ್​ ತಿಳಿಸಿದ್ದಾರೆ.

ABOUT THE AUTHOR

...view details