ನವದೆಹಲಿ:ಕೋವಿಡ್ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಇಸ್ಲಾಮಿಕ್ ವಿದ್ವಾಂಸ ಮತ್ತು ಶಾಂತಿ ಕಾರ್ಯಕರ್ತ, ಬರಹಗಾರ, ಈ ಬಾರಿಯ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಮೌಲಾನಾ ವಾಹಿದುದ್ದೀನ್ ಖಾನ್ (96) ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ.
ಜಾಫರುಲ್ ಇಸ್ಲಾಂ ಖಾನ್ ಟ್ವೀಟ್ ಈ ವಿಚಾರವನ್ನು ಟ್ವೀಟ್ ಮಾಡಿ ಮೌಲಾನಾ ಅವರ ಪುತ್ರ, ದೆಹಲಿ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಜಾಫರುಲ್ ಇಸ್ಲಾಂ ಖಾನ್ ಸ್ಪಷ್ಟಪಡಿಸಿದ್ದಾರೆ.
ಶಾಂತಿ ಮತ್ತು ಆಧ್ಯಾತ್ಮಿಕ ಕೇಂದ್ರದ ಸ್ಥಾಪಕ ಮೌಲಾನಾ ವಾಹಿದುದ್ದೀನ್ ಖಾನ್ ವಾಹಿದುದ್ದೀನ್ ಖಾನ್ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದು, "ಮೌಲಾನಾ ವಹಿದುದ್ದೀನ್ ಖಾನ್ ಅವರ ನಿಧನದಿಂದ ದುಃಖವಾಗಿದೆ. ಧರ್ಮಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಅವರ ಜ್ಞಾನಕ್ಕಾಗಿ ಅವರನ್ನು ಸ್ಮರಿಸಲಾಗುವುದು. ಸಮುದಾಯ ಸೇವೆ ಮತ್ತು ಸಾಮಾಜಿಕ ಸಬಲೀಕರಣದ ಬಗ್ಗೆಯೂ ಅವರು ಉತ್ಸುಕರಾಗಿದ್ದರು. ಅವರ ಕುಟುಂಬ ಮತ್ತು ಅಸಂಖ್ಯಾತ ಹಿತೈಷಿಗಳಿಗೆ ನನ್ನ ಸಾಂತ್ವನಗಳು" ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
1925 ರಲ್ಲಿ ಉತ್ತರ ಪ್ರದೇಶದ ಅಜಮ್ಗಢ್ನಲ್ಲಿ ಜನಿಸಿದ ಮೌಲಾನಾ ಅವರು 2001ರಲ್ಲಿ ಶಾಂತಿ ಮತ್ತು ಆಧ್ಯಾತ್ಮಿಕ ಕೇಂದ್ರವನ್ನು (ಸಿಪಿಎಸ್) ಸ್ಥಾಪಿಸಿದರು. ಮೌಲಾನಾ ಅವರಿಗೆ 2000ರಲ್ಲಿ ಪದ್ಮಭೂಷಣ, ರಾಷ್ಟ್ರೀಯ ನಾಗರಿಕರ ಪ್ರಶಸ್ತಿ, ಡೆಮಿಯುರ್ಗಸ್ ಪೀಸ್ ಇಂಟರ್ನ್ಯಾಷನಲ್ ಅವಾರ್ಡ್, 2009ರಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, 2021ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.