ಕರ್ನಾಟಕ

karnataka

ETV Bharat / bharat

ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ​: ಚಿನ್ನದ ಪದಕ ಗೆದ್ದು ಅಚ್ಚರಿಗೊಳಿಸಿದ 106 ವರ್ಷದ ವೃದ್ಧೆ

'ಚಾರ್ಖಿ ದಾದ್ರಿಯ ರಮಾಬಾಯಿ ಎಂಬುವವರು 100 ಮೀಟರ್ ಓಟದಲ್ಲಿ ಸಾಧನೆ ಮಾಡಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಅವರು ಕಳೆದ ವರ್ಷದಿಂದ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾರೆ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಎರಡೂ ಈವೆಂಟ್‌ಗಳಲ್ಲಿ ಸಕ್ರಿಯವಾಗಿ ಸ್ಪರ್ಧಿಸುತ್ತಿದ್ದಾರೆ. ಇವರಿಂದ ಎಲ್ಲಾ ಕ್ರೀಡಾಪಟುಗಳು ಸ್ಫೂರ್ತಿ ಪಡೆಯುತ್ತಾರೆ' ಎಂದು ಕ್ರೀಡಾ ಮತ್ತು ಗೃಹ ವ್ಯವಹಾರಗಳ ಸಚಿವ ಹರ್ಷ್ ಸಾಂಘ್ವಿ ಶುಭ ಹಾರೈಸಿದ್ದಾರೆ..

By

Published : Jun 17, 2022, 10:35 PM IST

ಚಾರ್ಖಿ ದಾದ್ರಿಯ ರಮಾಬಾಯಿ
ಚಾರ್ಖಿ ದಾದ್ರಿಯ ರಮಾಬಾಯಿ

ನವದೆಹಲಿ :'ಇಂಡಿಯನ್ ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌'ನಲ್ಲಿ ಚಿನ್ನ ಗೆಲ್ಲುವ ಮೂಲಕ 106 ವರ್ಷದ ವೃದ್ಧೆಯೊಬ್ಬರು ಎಲ್ಲರನ್ನು ಬೆರಗುಗೊಳಿಸಿದ್ದಾರೆ.

'ಚಾರ್ಖಿ ದಾದ್ರಿಯ ರಮಾಬಾಯಿ ಎಂಬುವರು 100 ಮೀಟರ್ ಓಟದಲ್ಲಿ ಸಾಧನೆ ಮಾಡಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಅವರು ಕಳೆದ ವರ್ಷದಿಂದ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾರೆ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಎರಡೂ ಈವೆಂಟ್‌ಗಳಲ್ಲಿ ಸಕ್ರಿಯವಾಗಿ ಸ್ಪರ್ಧಿಸುತ್ತಿದ್ದಾರೆ. ಇವರಿಂದ ಎಲ್ಲಾ ಕ್ರೀಡಾಪಟುಗಳು ಸ್ಫೂರ್ತಿ ಪಡೆಯುತ್ತಾರೆ' ಎಂದು ಕ್ರೀಡಾ ಮತ್ತು ಗೃಹ ವ್ಯವಹಾರಗಳ ಸಚಿವ ಹರ್ಷ್ ಸಾಂಘ್ವಿ ಶುಭ ಹಾರೈಸಿದ್ದಾರೆ.

ಮಂಜಲ್‌ಪುರ ಕ್ರೀಡಾಂಗಣದಲ್ಲಿ ರಮಾಬಾಯಿ

ಮೊದಲ ಭಾರತೀಯ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುವ ಸಲುವಾಗಿ ಓಟಗಾರ್ತಿ ರಮಾಬಾಯಿ ಮಂಜಲ್‌ಪುರ ಕ್ರೀಡಾಂಗಣಕ್ಕೆ ಆಗಮಿಸಿದರು. ಈ ವೇಳೆ ಕ್ರೀಡಾ ಮತ್ತು ಗೃಹ ಸಚಿವ ಹರ್ಷ್ ಸಾಂಘ್ವಿ ಅವರು ಗೌರವದಿಂದ ಬರಮಾಡಿಕೊಂಡರು. ಈ ವೇಳೆ ಅವರು ಅಲ್ಲಿ ನೆರೆದಿದ್ದಇತರ ಹಳೆಯ ಆಟಗಾರರಿಗೆ ಧನ್ಯವಾದವನ್ನು ಹೇಳಿದರು.

ಈ ಮೊದಲ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ದೇಶಾದ್ಯಂತ 1,440 ಹಿರಿಯ ಕ್ರೀಡಾಪಟುಗಳು (35 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಉತ್ಸಾಹದಿಂದ ಸ್ಪರ್ಧಿಸಿದ್ದರು. ಪಂದ್ಯಾವಳಿಯಲ್ಲಿ ಅಜ್ಜಿ ಮತ್ತು ಅವರ ಮೊಮ್ಮಗಳು ಭಾಗವಹಿಸಿದ್ದರು.

ಅವರು ಕಳೆದ 12 ತಿಂಗಳುಗಳಿಂದ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲದೇ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ಅವರ ಮರಿ ಮೊಮ್ಮಗಳು ಶರ್ಮಿಳಾ ಸಾಂಗ್ವಾನ್ 3000 ಮೀಟರ್ ಓಟದಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅವರು, ನಮ್ಮ ಕುಟುಂಬವು ರಾಷ್ಟ್ರದಾದ್ಯಂತ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸುತ್ತದೆ ಮತ್ತು ನನ್ನ ಅಜ್ಜಿ ಎಲ್ಲರಿಗೂ ಸ್ಫೂರ್ತಿಯಾಗಲಿದ್ದಾರೆ ಎಂದಿದ್ದಾರೆ.

ಕ್ರೀಡೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿಯಿಲ್ಲ- 100 ಮೀಟರ್ ಓಟದಲ್ಲಿ ಹರಿಯಾಣದ ಜಗದೀಶ್ ಶರ್ಮಾ (82) ಮಲವಿಸರ್ಜನೆಯ ಸಮಸ್ಯೆಯ ಹೊರತಾಗಿಯೂ 2ನೇ ಸ್ಥಾನದಲ್ಲಿ ಹೊರಹೊಮ್ಮಿದರು. ಶುಕ್ರವಾರ ಲಾಂಗ್ ಜಂಪ್‌ನಲ್ಲೂ ಸ್ಪರ್ಧಿಸಲಿದ್ದಾರೆ.

ಓದಿ:ಈ ವರ್ಷದ ಅಂತ್ಯಕ್ಕೆ ಜಮ್ಮು-ಕಾಶ್ಮೀರದ ಚುನಾವಣೆ ಸಾಧ್ಯತೆ : ರಕ್ಷಣಾ ಸಚಿವ ರಾಜನಾಥ್​ ಸಿಂಗ್​

For All Latest Updates

ABOUT THE AUTHOR

...view details