ಹೈದರಾಬಾದ್(ತೆಲಂಗಾಣ):ಹೆತ್ತ ತಾಯಿಯೇ ತನ್ನ ಮಗಳ ಮಕ್ಕಳನ್ನು(ಮೊಮ್ಮಕ್ಕಳು) 30 ಲಕ್ಷ ಹಣಕ್ಕಾಗಿ ಅಪಹರಿಸಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ರೂಹಿ ಇಬ್ಬರು ಮಕ್ಕಳಿಂದ ದೂರವಾಗಿ ಪರಿತಪಿಸುತ್ತಿರುವ ತಾಯಿ. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ರೂಹಿಗೆ ಇಬ್ಬರು ಮಕ್ಕಳಿದ್ದು, ಕೆಲ ದಿನಗಳ ಹಿಂದಷ್ಟೇ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವೇಳೆ ತಾಯಿ ಮತ್ತು ಅಕ್ಕನನ್ನು ತನ್ನ ಜೊತೆ ಇರಿಸಿಕೊಂಡು ಜೀವನ ಮಾಡುತ್ತಿದ್ದರು.
20 ದಿನಗಳ ಹಿಂದೆ ತನ್ನ ತಾಯಿ ಮತ್ತು ಅಕ್ಕ ತನ್ನಿಬ್ಬರು ಮಕ್ಕಳನ್ನು ಅಪಹರಿಸಿ, ಮನೆಯಲ್ಲಿದ್ದ ದಾಖಲೆ ಪತ್ರಗಳ ಸಮೇತ ನಾಪತ್ತೆಯಾಗಿದ್ದಾರೆ. ಮಕ್ಕಳು, ತಾಯಿಯ ಬಗ್ಗೆ ತನ್ನೆಲ್ಲ ಬಂಧುಗಳಲ್ಲಿ ವಿಚಾರಿಸಿದರೂ, ಯಾರೂ ಕೂಡ ಮಾಹಿತಿ ನೀಡಿಲ್ಲ. ಅಲ್ಲದೇ ತನ್ನ ಬಂಧುಗಳೇ ನನ್ನ ಮೇಲೆ ಹಲ್ಲೆ ಮಾಡಿ, ಫೋನ್, ಬಂಗಾರದ ಸರ ಕಿತ್ತುಕೊಂಡಿದ್ದಾರೆ ಎಂದು ರೂಹಿ ಆರೋಪಿಸಿದ್ದಾರೆ.