ಅನಂತಪುರ(ಆಂಧ್ರಪ್ರದೇಶ): ಅಜ್ಜ- ಮೊಮ್ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಯೆಲ್ಲನೂರಿನ ಲಕ್ಷುಂಪಲ್ಲಿ ಎಂಬಲ್ಲಿ ನಡೆದಿದೆ. ಮೃತರನ್ನು ತಡಿಮಾರಿ ತಾಲೂಕಿನ ನಯನಪಲ್ಲಿ ಗ್ರಾಮದ ಗಂಗಣ್ಣ ಮತ್ತು ಮೊಮ್ಮಗ ಗೌತಮ್ ಎಂದು ಗುರುತಿಸಲಾಗಿದೆ.
ಅಜ್ಜ ಮತ್ತು ಮೊಮ್ಮಗ ಇಬ್ಬರೂ ತಮ್ಮ ಕುರಿಗಳನ್ನು ತೊಳೆಯಲು ಗ್ರಾಮದ ಸಮೀಪದಲ್ಲಿರುವ ಚಿತ್ರಾವತಿ ನದಿಗೆ ತೆರಳಿದ್ದಾರೆ. ಈ ಸಂದರ್ಭ ಮೊಮ್ಮಗ ಗೌತಮ್ ಕಾಲು ನದಿಯಲ್ಲಿ ಸಿಲುಕಿದೆ. ಈ ಸಂದರ್ಭ ಮೊಮ್ಮಗನನ್ನು ರಕ್ಷಿಸಲು ಹೋಗಿ ಗಂಗಣ್ಣ ಮತ್ತು ಮೊಮ್ಮಗ ಗೌತಮ್ ಇಬ್ಬರೂ ನೀರು ಪಾಲಾಗಿದ್ದಾಗಿ ತಿಳಿದು ಬಂದಿದೆ.