ಜಗಿತ್ಯಾಲ: ಜಿಲ್ಲೆಯ ಮಡಿಪಲ್ಲಿ ಮಂಡಲದ ಕಲ್ವಕೋಟದಲ್ಲಿ ಕೊಲೆಯೊಂದು ಸಂಚಲನ ಮೂಡಿಸಿದೆ. ತನ್ನ ಸ್ವಂತ ಅಜ್ಜನನ್ನು ಮೊಮ್ಮಗನೊಬ್ಬ ಕಲ್ಲಿನಿಂದ ಮನಸೋ ಇಚ್ಛೆ ಜಜ್ಜಿ ಕೊಲೆ ಮಾಡಿದ್ದಾನೆ.
ಗ್ರಾಮದ ಮಲ್ಲಯ್ಯನನ್ನು ಎಲ್ಲರೂ ನೋಡು - ನೋಡುತ್ತಿದ್ದಂತೆ ಆತನ ಮೊಮ್ಮಗ ಚಂದು ತಲೆ ಮೇಲೆ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ದಾನೆ. ಅತ್ಯಂತ ಬಲವಾಗಿ ಹಲ್ಲೆ ಮಾಡಿದ್ದರಿಂದ ಅಜ್ಜ ಮಲ್ಲಯ್ಯ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಆದರೂ ಇಷ್ಟಕ್ಕೆ ಸುಮ್ಮನಾಗದ ಚಂದು ತನ್ನ ಅಜ್ಜ ಮಲ್ಲಯ್ಯ ಮೃತ ದೇಹವನ್ನು ಬೈಕ್ ಮೇಲೆ ತೆಗೆದುಕೊಂಡು ಹೋಗಿದ್ದಾನೆ. ಇಂತಹ ಘಟನೆ ನಡು ರಸ್ತೆಯಲ್ಲಿ ನಡೆದರೂ ಯಾರೊಬ್ಬರು ಅಜ್ಜನ ಸಹಾಯಕ್ಕೆ ಮುಂದೆ ಬರಲಿಲ್ಲ. ಪ್ರತಿಯೊಬ್ಬರು ಮೌನ ಪ್ರೇಕ್ಷರಂತೆ ನೋಡುತ್ತಲೇ ನಿಂತಿದ್ದರು.