ಮಥುರಾ(ಉತ್ತರ ಪ್ರದೇಶ):ತಾವು ಪ್ರೀತಿಸಿರುವ ಸುದ್ದಿ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಭಯದಲ್ಲಿ ಪ್ರಿಯಕರನ ಜೊತೆ ಸೇರಿ ಮೊಮ್ಮಗಳೇ ತನ್ನ ಅಜ್ಜಿಯನ್ನು ಕೊಲೆ ಮಾಡಿರುವ ಭಯಾನಕ ಘಟನೆ ಮಥುರಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಾರ್ಚ್ 8ರಂದು ಈ ಘಟನೆ ನಡೆದಿದ್ದು, ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಥುರಾದ ವಾಲೆಪಾಲಿ ಖೇಡಾ ಗ್ರಾಮದಲ್ಲಿ ವೃದ್ಧೆಯ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕೊಲೆ ಮಾಡಿರುವುದು ಮೊಮ್ಮಗಳು ಹಾಗೂ ಆತನ ಪ್ರಿಯಕರ ಎಂಬುದು ತಿಳಿದು ಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಶಕುಂತಲಾ(65) ವಾಲೆಪಾಲಿ ಖೇಡಾ ಗ್ರಾಮದಲ್ಲಿ ಮಗ ಹರಿ ಸಿಂಗ್ ಜೊತೆ ವಾಸವಾಗಿದ್ದರು. ಮಾರ್ಚ್ 8ರಂದು ಹರಿ ಸಿಂಗ್ ತಮ್ಮ ಅತ್ತೆ ಮನೆಗೆ ಹೋಗಿದ್ದರು. ಈ ವೇಳೆ 14 ವರ್ಷದ ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾರೆ.