ಕರ್ನಾಟಕ

karnataka

ETV Bharat / bharat

ಭಾಷೆಯ ತಡೆಗೋಡೆ ನಿವಾರಿಸುವ ತಂತ್ರಜ್ಞಾನ ಅಭಿವೃದ್ಧಿ : ಅಜಯ್ ಪ್ರಕಾಶ್ ಸಾಹ್ನಿ ಭರವಸೆ - ಅಜಯ್ ಪ್ರಕಾಶ್ ಸಾಹ್ನಿ

ಒಂದೇ ಭಾಷೆಯನ್ನು ಮಾತನಾಡದ ಇಬ್ಬರು ವ್ಯಕ್ತಿಗಳ ನಡುವೆ ಸಂವಹನ ವಿನಿಮಯಕ್ಕೆ ಅನುವು ಮಾಡಿಕೊಡುವ ಸಲುವಾಗಿ ನೈಜ ಸಮಯದಲ್ಲಿ ವಿವಿಧ ಸ್ಥಳೀಯ ಭಾಷೆಗಳಲ್ಲಿ ಭಾಷಾಂತರಿಸಬಲ್ಲ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ತಿಳಿಸಿದ್ದಾರೆ..

technology
technology

By

Published : Jun 19, 2021, 10:09 PM IST

ನವದೆಹಲಿ :ಒಂದೇ ಭಾಷೆಯನ್ನು ಮಾತನಾಡದ ಇಬ್ಬರು ವ್ಯಕ್ತಿಗಳ ನಡುವೆ ಸಂವಹನ ವಿನಿಮಯಕ್ಕೆ ಅನುವು ಮಾಡಿಕೊಡುವ ಸಲುವಾಗಿ ನೈಜ ಸಮಯದಲ್ಲಿ ವಿವಿಧ ಸ್ಥಳೀಯ ಭಾಷೆಗಳಲ್ಲಿ ಭಾಷಾಂತರಿಸಬಲ್ಲ ತಂತ್ರಜ್ಞಾನದಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. 5-7 ವರ್ಷಗಳ ಕಾಲಮಿತಿ ಹೊಂದಿರುವ ಈ ಮಹತ್ವಾಕಾಂಕ್ಷೆಯ ಭಾಷಾ ಅನುವಾದ ಯೋಜನೆಯನ್ನು, ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ದೇಶದಲ್ಲಿನ ಭಾಷೆಯ ತಡೆಗೋಡೆ ಕೊನೆಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು MEITY ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾಹ್ನಿ ಹೇಳಿದರು.

ನೀವು ನಿಮ್ಮದೇ ಭಾಷೆಯಲ್ಲಿ ಮಾತನಾಡಿ... ಅವರು ಅವರದ್ದೇ ಭಾಷೆಯಲ್ಲಿ ಉತ್ತರಿಸಲಿ

"ನಾವು ಬಹಳ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಭಾಷಾ ಅನುವಾದ ಕಾರ್ಯಾಚರಣೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ಬಂಗಾಳಿ ಮಾತ್ರ ತಿಳಿದಿರುವ ವ್ಯಕ್ತಿಯು ಮಲಯಾಳಂ ವ್ಯಕ್ತಿಯೊಂದಿಗೆ ಸಂವಹನ ನಡೆಸಲು ಸಾಧ್ಯವಿಲ್ಲ ಎಂಬ ವಾಸ್ತವದೊಂದಿಗೆ ನಾವು ಶತಮಾನಗಳಿಂದ ಬದುಕಿದ್ದೇವೆ. ಇದು ಬದಲಾಗುತ್ತದೆ ಎಂದು MEITY ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾಹ್ನಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.

ನ್ಯಾಷನಲ್ ಇಂಟರ್ನೆಟ್ ಎಕ್ಸ್​ಚೇಂಜ್​​ ಆಫ್ ಇಂಡಿಯಾ(NIXI)18 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಈ ತಂತ್ರಜ್ಞಾನದಿಂದ ಜನರು ಬಂಗಾಳಿ ಮಾತ್ರ ಮಾತನಾಡುವುದರಿಂದ ಮಲಯಾಳಂ ಮಾತ್ರ ಮಾತನಾಡುವವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ಸಾಹ್ನಿ ಉದಾಹರಣೆಯೊಂದಿಗೆ ವಿವರಿಸಿದರು. "ಭಾರತವು ಕೇವಲ ಒಂದು ದೇಶವಲ್ಲ, ಭೂಖಂಡದ ಸಾಕಷ್ಟು ಪ್ರಮಾಣವನ್ನು ಹೊಂದಿದೆ. ಯುರೋಪ್ ವ್ಯವಹರಿಸಬೇಕಾದ ಭಾಷೆಗಳ ಸಂಖ್ಯೆ ಹೆಚ್ಚು" ಎಂದು ಸಾಹ್ನಿ ಹೇಳಿದರು. ಹೊಸ ತಂತ್ರಜ್ಞಾನಗಳ ಸಹಾಯದಿಂದ ಭಾಷೆಯ ತಡೆಗೋಡೆ ಕೊನೆಗೊಳ್ಳಬಹುದು.

ಇನ್ನೈದು ವರ್ಷಗಳಲ್ಲಿ ಈ ತಂತ್ರಜ್ಞಾನ ಎಲ್ಲರಿಗೂ ಸಿಗಬಹುದು!

"ಇದು ನಮಗೆ 5-7 ವರ್ಷಗಳನ್ನು ತೆಗೆದುಕೊಳ್ಳಬಹುದು. ಆದರೆ, ಬರುವ ತಂತ್ರಜ್ಞಾನಗಳು ಈ ರೀತಿಯ ಮಹತ್ವಾಕಾಂಕ್ಷೆಯ ಮಟ್ಟವನ್ನು ಗುರಿಯಾಗಿಸಲು ನಮಗೆ ಅವಕಾಶವನ್ನು ನೀಡುತ್ತವೆ. ನಮ್ಮ ಪ್ರತಿಯೊಂದು ಭಾಷೆಯಲ್ಲೂ ನಾವು ಅಂತರ್ಜಾಲದಲ್ಲಿ ವಿಷಯವನ್ನು ಬೆಳೆಸಬೇಕಾಗಿದೆ" ಎಂದು ಸಾಹ್ನಿ ಹೇಳಿದರು. ಟಿ ಮತ್ತು ಎಲೆಕ್ಟ್ರಾನಿಕ್ಸ್ ಪ್ರತಿಯೊಂದು ವಲಯದಲ್ಲೂ ಆಳವಾಗುವುದರೊಂದಿಗೆ ಭಾರತೀಯ ಆರ್ಥಿಕತೆಯು ನಿಧಾನವಾಗಿ ಡಿಜಿಟಲ್ ಆರ್ಥಿಕತೆಯತ್ತ ಸಾಗುತ್ತಿದೆ ಎಂದು ಸಾಹ್ನಿ ಹೇಳಿದರು.

2.51 ಲಕ್ಷ ಗ್ರಾಮ ಪಂಚಾಯತ್‌ಗಳಲ್ಲಿ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ಸಾಮಾನ್ಯ ಸೇವಾ ಕೇಂದ್ರಗಳೊಂದಿಗೆ ದೇಶದ ಪ್ರತಿ ಮೂಲೆ ಮೂಲೆಯಲ್ಲಿ ಡಿಜಿಟಲ್ ಸೇವೆಗಳು ವಿಸ್ತರಿಸಿದ್ದು, ಸಕ್ರಿಯ ಇಂಟರ್ನೆಟ್ ಬಳಕೆದಾರರ ಸಂಖ್ಯೆ 2014 ರಲ್ಲಿ 23.3 ಕೋಟಿಯಿಂದ 79.5 ಕೋಟಿ ಸಕ್ರಿಯ ಇಂಟರ್‌ನೆಟ್‌ ಬಳಕೆದಾರರಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಸಾಹ್ನಿ ತಿಳಿಸಿದ್ದಾರೆ.

ಡಿಜಿಟಲ್ ಪಾವತಿಗಳು ಬೆಳೆದಿವೆ. ಡಿಜಿಟಲ್ ವಹಿವಾಟು ಮಾರ್ಚ್ 2016ರಲ್ಲಿ 593.61 ಕೋಟಿಯಿಂದ 2020ರ ಮಾರ್ಚ್‌ನಲ್ಲಿ 3,434 ಕೋಟಿಗೆ ಏರಿದೆ ಎಂದು ಅವರು ಹೇಳಿದರು. "ಈ ರೀತಿಯ ವಹಿವಾಟಿನ ಪ್ರಮಾಣದೊಂದಿಗೆ, ನಾವು ಪ್ರಸ್ತುತ ವಿಶ್ವದ ಅಗ್ರ ಸ್ಥಾನದಲ್ಲಿದ್ದೇವೆ ಮತ್ತು ಚೀನಾ ನಂತರ 15.7 ಬಿಲಿಯನ್ ವಹಿವಾಟು ನಡೆಸಿದ್ದೇವೆ ಎಂದು ಸಾಹ್ನಿ ಹೇಳಿದರು.

ABOUT THE AUTHOR

...view details