ನವದೆಹಲಿ:ದೇಶಕ್ಕೆ ಮೋಸ ಹಾಗೂ ಬಡವರ ಲೂಟಿ ಮಾಡುವವರು ಎಷ್ಟೇ ಬಲಶಾಲಿಗಳಾಗಿದ್ದರೂ ಪರವಾಗಿಲ್ಲ, ಅವರನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ಕೇವಡಿಯಾದಲ್ಲಿ ನಡೆದ ಸಿಬಿಐ ಮತ್ತು ಸಿವಿಸಿ ಜಂಟಿ ಸಮಾವೇಶ ಉದ್ದೇಶಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತಕ್ಕೆ ದ್ರೋಹ ಎಸಗುವವರನ್ನ ಯಾವುದೇ ಕಾರಣಕ್ಕೂ ಬಿಡಲ್ಲ. ಅವರು ಮಾಡುವ ಭ್ರಷ್ಟಾಚಾರ ದೊಡ್ಡದಾಗಿರಲಿ, ಅಥವಾ ಸಣ್ಣದಾಗಿರಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ದೇಶ ಮತ್ತು ಅಲ್ಲಿನ ನಾಗರಿಕರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಬಿಐ ಹಾಗೂ ಸಿವಿಸಿಗಳಿಗೂ ಕಿವಿಮಾತು ಹೇಳಿರುವ ನಮೋ, ನೀವೂ ಈ ದೇಶದ ಮಣ್ಣು ಹಾಗೂ ಭಾರತಕ್ಕಾಗಿ ಕೆಲಸ ಮಾಡುತ್ತಿದ್ದೀರಿ ಎಂಬುದನ್ನ ಗಮನದಲ್ಲಿಟ್ಟುಕೊಳ್ಳುವಂತೆ ಕಿವಿ ಮಾತು ಹೇಳಿದರು.
ಕಳೆದ 6-7 ವರ್ಷಗಳಲ್ಲಿ ನಮ್ಮ ಸರ್ಕಾರ ಕೈಗೊಂಡಿರುವ ಅನೇಕ ಕಠಿಣ ನಿರ್ಧಾರಗಳಿಂದ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೇ ಸರ್ಕಾರಿ ಯೋಜನೆಗಳು ನೇರವಾಗಿ ಜನರಿಗೆ ಸಿಗುತ್ತಿವೆ. ಆದರೆ, ಹಿಂದಿನ ಸರ್ಕಾರಕ್ಕೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಆಸಕ್ತಿ ಇರಲಿಲ್ಲ ಎಂದು ಆರೋಪ ಮಾಡಿದರು.
ಇದನ್ನೂ ಓದಿರಿ:ಇದು ತೆಲಂಗಾಣದ ತಿರುಪತಿ.. ಯಾದಾದ್ರಿ ದೇಗುಲಕ್ಕೆ 125 ಕೆಜಿ ಚಿನ್ನ ಖರೀದಿಗೆ ಮುಂದಾದ ತೆಲಂಗಾಣ ಸರ್ಕಾರ