ಕರ್ನಾಟಕ

karnataka

ETV Bharat / bharat

ಅತ್ಯಾಚಾರ ಆರೋಪ: ಐಎಎಸ್ ಅಧಿಕಾರಿ ಜಿತೇಂದ್ರ ನಾರಾಯಣ್ ಅಮಾನತು - IAS officer Jitendra Narayan

ನರೇನ್ ಅವರು ದ್ವೀಪಸಮೂಹದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಬಗ್ಗೆ ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು ಭಾನುವಾರ ಸಚಿವಾಲಯ ವರದಿ ಸಲ್ಲಿಸಿದೆ.

IAS officer Jitendra Narayan
ಐಎಎಸ್ ಅಧಿಕಾರಿ ಜಿತೇಂದ್ರ ನಾರಾಯಣ್

By

Published : Oct 17, 2022, 10:47 PM IST

Updated : Oct 17, 2022, 11:05 PM IST

ನವದೆಹಲಿ:ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜಿತೇಂದ್ರ ನರೇನ್ ಅವರನ್ನು ಕೇಂದ್ರ ಗೃಹ ಸಚಿವಾಲಯವು ತಕ್ಷಣದಿಂದ ಜಾರಿಗೆ ಬರುವಂತೆ ಸೋಮವಾರ ಅಮಾನತುಗೊಳಿಸಿದೆ.

ತಮ್ಮ ದರ್ಜೆ ಮತ್ತು ಸ್ಥಾನಮಾನವನ್ನು ಲೆಕ್ಕಿಸದ ಅಧಿಕಾರಿಯ ಅಶಿಸ್ತಿನ ವಿಶೇಷವಾಗಿ ಮಹಿಳೆಯರ ಘನತೆಗೆ ಸಂಬಂಧಿಸಿದ ಕೃತ್ಯಗಳ ಬಗ್ಗೆ ಶೂನ್ಯ-ಸಹಿಷ್ಣುತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ನರೇನ್ ಅವರು ದ್ವೀಪಸಮೂಹದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಬಗ್ಗೆ ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು ಭಾನುವಾರ ಸಚಿವಾಲಯ ವರದಿ ಸಲ್ಲಿಸಿದೆ.

1990ರ ಬ್ಯಾಚ್‌ನ AGMUT ಕೇಡರ್‌ನ IAS ಅಧಿಕಾರಿ ನರೇನ್ ಅವರು ಮಾಡಿರುವ ಗಂಭೀರ ದುಷ್ಕೃತ್ಯ ಮತ್ತು ಅಧಿಕೃತ ಸ್ಥಾನದ ದುರುಪಯೋಗದ ಸಾಧ್ಯತೆಯನ್ನು ವರದಿ ಸೂಚಿಸಿದ್ದರಿಂದ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾನೂನಿನ ಪ್ರಕಾರ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ತಕ್ಷಣ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.

ಅದರಂತೆ ನಾರಾಯಣ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಎಫ್‌ಐಆರ್ ದಾಖಲಾಗಿದ್ದು, ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರ ವಿಶೇಷ ತನಿಖಾ ತಂಡವು ಕ್ರಿಮಿನಲ್ ಪ್ರಕರಣದಲ್ಲಿ ಪ್ರತ್ಯೇಕವಾಗಿ ಕ್ರಮ ಕೈಗೊಳ್ಳುತ್ತಿದೆ.

ಇದನ್ನೂ ಓದಿ:ಕೋಲಾರ ಕಲ್ಲುಕ್ವಾರಿ ಸ್ಫೋಟ ಪ್ರಕರಣ: ಇನ್ಸ್​ಪೆಕ್ಟರ್ ಅಮಾನತು

Last Updated : Oct 17, 2022, 11:05 PM IST

ABOUT THE AUTHOR

...view details