ಕರ್ನಾಟಕ

karnataka

ETV Bharat / bharat

ಜಾಹೀರಾತುಗಳಿಗಾಗಿ 1,700 ಕೋಟಿ ರೂ. ವೆಚ್ಚ.. ಲೋಕಸಭೆಯಲ್ಲಿ ಕೇಂದ್ರದ ಮಾಹಿತಿ - ಕೇಂದ್ರ ಸರ್ಕಾರ ಜಾಹೀರಾತು ವೆಚ್ಚ

ಸಂಸತ್​ ಅಧಿವೇಶನದಲ್ಲಿ ಪ್ರತಿಪಕ್ಷಗಳು ಕೇಳುತ್ತಿರುವ ಅನೇಕ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಲಿಖಿತ ರೂಪದಲ್ಲಿ ಉತ್ತರ ನೀಡ್ತಿದೆ. ಜಾಹೀರಾತುಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಹಣ ವ್ಯಯ ಮಾಡಿದೆ ಎಂಬುದರ ಬಗ್ಗೆ ಇಂದು ಸಚಿವ ಅನುರಾಗ್​ ಠಾಕೂರ್ ಮಾಹಿತಿ ನೀಡಿದ್ದಾರೆ.

Centre spent Rs 1700 crore on ads in three years
Centre spent Rs 1700 crore on ads in three years

By

Published : Dec 7, 2021, 10:58 PM IST

ನವದೆಹಲಿ:ಕೇಂದ್ರದವಿವಿಧ ಯೋಜನೆಗಳ ಜಾಹೀರಾತುಗಳಿಗಾಗಿ ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 1,700 ಕೋಟಿ ರೂಪಾಯಿ ಖರ್ಚು ಮಾಡಿದ್ದಾಗಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.

ಪ್ರತಿಪಕ್ಷಗಳು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್​ ಠಾಕೂರ್​, ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿನ ಜಾಹೀರಾತಿಗೋಸ್ಕರ ಕಳೆದ ಮೂರು ವರ್ಷಗಳಲ್ಲಿ 1,700 ಕೋಟಿ ರೂ. ವ್ಯಯ ಮಾಡಿರುವ ಮಾಹಿತಿ ನೀಡಿದ್ದಾರೆ. 2018-19ರಿಂದ 2020-21ರ ಅವಧಿಯಲ್ಲಿ 1,698.98 ಕೋಟಿ ರೂ. ಬಳಕೆಯಾಗಿದೆ ಎಂದರು.

ಲಿಖಿತ ರೂಪದಲ್ಲಿ ಕೇಂದ್ರ ಸಚಿವರು ಈ ಮಾಹಿತಿ ನೀಡಿದ್ದು, ಮುದ್ರಣ, ದೃಶ್ಯ ಹಾಗೂ ಹೊರಾಂಗಣ ಮಾಧ್ಯಮಗಳ ಮೂಲಕ ದೂರದ ಪ್ರದೇಶಗಳಲ್ಲಿರುವ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂಬ ಮಾಹಿತಿ ನೀಡಿದರು. ಫಲಾನುಭವಿಗಳು ಸರ್ಕಾರದ ಯೋಜನೆಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಾಹೀರಾತು ನೀಡಲಾಗುತ್ತಿದೆ ಎಂದಿರುವ ಸಚಿವರು, ಪತ್ರಿಕೆಗಳಲ್ಲಿನ ಜಾಹೀರಾತಿಗಾಗಿ 826.5 ಕೋಟಿ ರೂ ವೆಚ್ಚ ಮಾಡಿದೆ ಎಂದರು.

ಇದನ್ನೂ ಓದಿರಿ:''ಕಾಂಗ್ರೆಸ್​​​ ಇಲ್ಲದೇ ಪ್ರತಿಪಕ್ಷವಿಲ್ಲ'', UPA ಸೇರುವ ಬಗ್ಗೆ ಶಿವಸೇನೆ ಶೀಘ್ರದಲ್ಲೇ ನಿರ್ಧಾರ ಎಂದ ರಾವತ್​

2020-21ರಲ್ಲಿ 6,085 ಪತ್ರಿಕೆಗಳಲ್ಲಿನ ಜಾಹೀರಾತಿಗಾಗಿ 118.59 ಕೋಟಿ ರೂ., 2019-20ರಲ್ಲಿ 5,365 ಪತ್ರಿಕೆಗಳಲ್ಲಿ ಜಾಹೀರಾತಿಗೋಸ್ಕರ 200 ಕೋಟಿ ರೂ. ಮತ್ತು 2018-19ರಲ್ಲಿ 6,119 ಪತ್ರಿಕೆಯಲ್ಲಿನ ಜಾಹೀರಾತುಗಳಿಗಾಗಿ 507.9 ಕೋಟಿ ರೂ. ಖರ್ಚು ಮಾಡಿರುವ ಮಾಹಿತಿ ನೀಡಿದರು. ಇನ್ನು ದೃಶ್ಯ ಮಾಧ್ಯಮಗಳಲ್ಲಿನ ಜಾಹೀರಾತುಗೋಸ್ಕರ ಕೇಂದ್ರ 193.52 ಕೋಟಿ ರೂ. ಖರ್ಚು ಮಾಡಿದೆ.

ABOUT THE AUTHOR

...view details