ಕರ್ನಾಟಕ

karnataka

ETV Bharat / bharat

Air India ಉಳಿಕೆ ಆಸ್ತಿ, ಹೊಣೆಗಾರಿಕೆ ಕಂಪನಿಗೆ ₹62 ಸಾವಿರ ಕೋಟಿ; ಸಂಸತ್‌ ಅನುಮನೋದನೆ ಕೋರಿದ ಸರ್ಕಾರ

ಖಾಸಗೀಕರಣದ ನಂತರ ಏರ್ ಇಂಡಿಯಾದ ಉಳಿಕೆ ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಹೊಂದಿರುವ ಕಂಪನಿಗೆ 62,000 ಕೋಟಿ ರೂ. ನೀಡಲು ಸರ್ಕಾರ ಸಂಸತ್ತಿನ ಅನುಮೋದನೆ ಕೋರಿದೆ. ಇದು 3.73 ಲಕ್ಷ ಕೋಟಿ ಹೆಚ್ಚುವರಿ ವೆಚ್ಚದ ಭಾಗವಾಗಿದೆ..

Govt seeks Par nod for Rs 62K cr infusion in AIAHL as part of Rs 3.73 lakh cr extra spending
Air India ಉಳಿಕೆ ಆಸ್ತಿ, ಹೊಣೆಗಾರಿಕೆ ಕಂಪನಿಗೆ 62 ಸಾವಿರ ಕೋಟಿ; ಸಂಸತ್‌ ಅನುಮನೋದನೆ ಕೋರಿದ ಸರ್ಕಾರ

By

Published : Dec 3, 2021, 6:26 PM IST

ನವದೆಹಲಿ :ಪ್ರಸಕ್ತ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಖಾಸಗೀಕರಣದ ನಂತರ 3.73 ಲಕ್ಷ ಕೋಟಿ ಹೆಚ್ಚುವರಿ ವೆಚ್ಚದ ಭಾಗವಾಗಿ ಏರ್ ಇಂಡಿಯಾದ ಉಳಿಕೆ ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಹೊಂದಿರುವ ಕಂಪನಿಗೆ 62,000 ಕೋಟಿ ರೂ. ನೀಡಲು ಸರ್ಕಾರ ಸಂಸತ್ತಿನ ಅನುಮೋದನೆ ಕೋರಿದೆ.

ಈ ವೆಚ್ಚದಲ್ಲಿ ಹೆಚ್ಚುವರಿ ರಸಗೊಬ್ಬರ ಸಬ್ಸಿಡಿ ಮೂಲಕ 58,430 ಕೋಟಿ ರೂ., ಬಾಕಿ ಉಳಿದಿರುವ ರಫ್ತು ಪ್ರೋತ್ಸಾಹ ಪಾವತಿಗೆ 53,123 ಕೋಟಿ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ನಿಧಿಗೆ ವರ್ಗಾಯಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ 22,039 ಕೋಟಿ ರೂ. ನೀಡಬೇಕಿದೆ.

ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಮಂಡಿಸಲಾದ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಎರಡನೇ ಪಟ್ಟಿಯನ್ನು ಮಂಡಿಸಿದರು. ಇದು 2.99 ಲಕ್ಷ ಕೋಟಿಗೂ ಹೆಚ್ಚು ನಿವ್ವಳ ನಗದು ಹೊರ ಹೋಗುವಿಕೆ ಹಾಗೂ 74,517 ಕೋಟಿ ರೂ. ಹೆಚ್ಚುವರಿ ವೆಚ್ಚವನ್ನು ವಿವಿಧ ಸಚಿವಾಲಯಗಳ ಉಳಿತಾಯದ ಮೂಲಕ ಹೊಂದಿಸುತ್ತದೆ.

ಏರ್ ಇಂಡಿಯಾ ಸಾಲಕ್ಕೆ 2,628 ಕೋಟಿ ರೂ.

ದಾಖಲೆಯ ಪ್ರಕಾರ, ಹಿಂದಿನ ಸರ್ಕಾರದ ಖಾತರಿಯ ಸಾಲ ಮತ್ತು ಏರ್ ಇಂಡಿಯಾದ ಹಿಂದಿನ ಬಾಕಿ/ಬಾಧ್ಯತೆಗಳ ಮರುಪಾವತಿಗಾಗಿ ಏರ್ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಕಂಪನಿ (AIAHL)ಯಲ್ಲಿ ಇಕ್ವಿಟಿ ಇನ್‌ಫ್ಯೂಷನ್‌ಗಾಗಿ 62,057 ಕೋಟಿ ರೂ.ಗಳನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನೀಡಲಾಗುತ್ತದೆ.

ಏರ್ ಇಂಡಿಯಾಗೆ ಸಾಲ ಮತ್ತು ಮುಂಗಡಗಳಿಗೆ ಹೆಚ್ಚುವರಿಯಾಗಿ 2,628 ಕೋಟಿ ರೂ.ಗಳನ್ನು ನೀಡಲಾಗುತ್ತದೆ. ಹೆಚ್ಚುವರಿ ರಸಗೊಬ್ಬರ ಸಬ್ಸಿಡಿಯು ಸ್ಥಳೀಯ ಮತ್ತು ಆಮದು ಮಾಡಿಕೊಂಡ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ & ಕೆ) ಸಬ್ಸಿಡಿಗೆ ಪಾವತಿಯ ಖಾತೆಯಲ್ಲಿ 43,430 ಕೋಟಿ ರೂ. ಹಾಗೂ ಯೂರಿಯಾ ಸಬ್ಸಿಡಿ ಯೋಜನೆಗೆ 15,000 ಕೋಟಿಗಳನ್ನು ನೀಡಬೇಕಿದೆ.

2021-22ರ ಬಜೆಟ್‌ನಲ್ಲಿ ಸರ್ಕಾರದ ಒಟ್ಟು ವೆಚ್ಚ 34.83 ಲಕ್ಷ ಕೋಟಿ ರೂ. ಆದರೆ, ಇದುವರೆಗೆ ಸರ್ಕಾರವು ಪ್ರಸ್ತುತಪಡಿಸಿದ ಅನುದಾನಕ್ಕಾಗಿ ಎರಡು ಬ್ಯಾಚ್‌ಗಳ ಪೂರಕ ಬೇಡಿಕೆಗಳನ್ನು ಪರಿಗಣಿಸಿದ್ದು, ಈ ಮಿತಿ ಮೀರಿರುವ ನಿರೀಕ್ಷೆಯಿದೆ. ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಮೊದಲ ಬ್ಯಾಚ್‌ನಲ್ಲಿ 23,675 ಕೋಟಿ ರೂಪಾಯಿ ನಿವ್ವಳ ಹೆಚ್ಚುವರಿ ವೆಚ್ಚಕ್ಕಾಗಿ ಆಗಸ್ಟ್‌ನಲ್ಲಿ ಸರ್ಕಾರವು ಸಂಸತ್ತಿನ ಅನುಮೋದನೆಯನ್ನು ಪಡೆದಿತ್ತು.

ಇದನ್ನೂ ಓದಿ:ದೇಶದಲ್ಲಿ ಈವರೆಗೂ 3.46 ಕೋಟಿ ಮಂದಿಗೆ ಕೊರೊನಾ : ಕೇಂದ್ರ ಆರೋಗ್ಯ ಸಚಿವ ಮನ್ಸುಕ್​ ಮಾಂಡವೀಯ ಮಾಹಿತಿ

ABOUT THE AUTHOR

...view details