ನವದೆಹಲಿ:ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಆರೋಗ್ಯ ವಲಯಕ್ಕೆ 17,000 ಕೋಟಿ ರೂ. ಸೇರಿದಂತೆ 23,675 ಕೋಟಿ ರೂ. ಹೆಚ್ಚುವರಿ ವೆಚ್ಚಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಕೋರಿದ್ದಾರೆ.
ಹೆಚ್ಚುವರಿ ಅನುದಾನ ಬೇಡಿಕೆ ಪಟ್ಟಿಯನ್ನು ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದು, ಇದರಲ್ಲಿ 17,000 ಕೋಟಿ ರೂ. ಆರೋಗ್ಯ ಸಚಿವಾಲಯಕ್ಕೆ ಬಳಕೆ ಮಾಡಲು ನಿರ್ಧರಿಸಲಾಗಿದೆ. 2021-22ರ ಸಾಲಿನಲ್ಲಿ ಹೆಚ್ಚುವರಿ ಅನುದಾನ ವೆಚ್ಚವಾಗಿ 1.87 ಲಕ್ಷ ಕೋಟಿ ರೂ. ಅಂದಾಜಿಸಲಾಗಿದೆ. ಇದರಲ್ಲಿ 23,674 ಕೋಟಿ ರೂ. ನಗದು ಅವಶ್ಯಕತೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ಮಗ ಕೇಂದ್ರ ಸಚಿವ... ಇಳಿವಯಸ್ಸಿನ ತಂದೆ-ತಾಯಿಯದ್ದು ಗದ್ದೆಯಲ್ಲಿ ಕೆಲಸ, ಗುಡಿಸಿಲಲ್ಲೇ ವಾಸ
2,050 ಕೋಟಿ ರೂ. ವಿಮಾನಯಾನ ಇಲಾಖೆ, 1,872 ಕೋಟಿ ಏರ್ ಇಂಡಿಯಾ ಹಾಗೂ 1,100 ಕೋಟಿ ಆಹಾರ, ಗ್ರಾಹಕರ ಇಲಾಖೆಗೆ ಖರ್ಚು ಮಾಡುವ ಇರಾದೆ ಇಟ್ಟುಕೊಳ್ಳಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. ಉಳಿದಂತೆ ಉಳಿದಂತೆ ಡ್ರಗ್ಸ್ ಲಿಮಿಟೆಡ್ ಇಲಾಖೆಯಲ್ಲಿ 889.50 ಕೋಟಿ ರೂ, ಸಾಲ ಮನ್ನಾ ಯೋಜನೆಗೆ 107.49 ಕೋಟಿ ರೂ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಹಾವಳಿ ನಿಯಂತ್ರಣ ಮಾಡುವ ಉದ್ದೇಶದಿಂದ 16.463 ಕೋಟಿ ರೂ. ಹೆಚ್ಚುವರಿಯಾಗಿ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.