ನವದೆಹಲಿ: ಭಾರತದಾದ್ಯಂತ ಕೋವಿಡ್ -19 ಲಸಿಕೆಗಳ ಕೊರತೆಯ ವರದಿ ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರವು ಇತ್ತೀಚೆಗೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಯಿಂದ 50 ಲಕ್ಷ ಡೋಸ್ ಕೋವಿಶೀಲ್ಡ್ ಅನ್ನು ಯುನೈಟೆಡ್ ಕಿಂಗ್‌ಡಮ್‌ಗೆ ರಫ್ತು ಮಾಡುವ ಮನವಿಯನ್ನು ತಿರಸ್ಕರಿಸಿ ಆ ಲಸಿಕೆಯನ್ನು ಭಾರತಕ್ಕೆ ಬಳಕೆ ಮಾಡಲು ಸೂಚಿಸಲಾಗಿದೆ.
ಈ ಹಿನ್ನೆಲೆ ಈ ಲಸಿಕೆ ಈಗ ಭಾರತದ ದೇಶೀಯ ಬಳಕೆಗೆ ಲಭ್ಯವಾಗಲಿದೆ ಎಂದು ಸರ್ಕಾರ ಹೇಳಿದೆ. ಲಸಿಕೆಯನ್ನು ಪಡೆಯಲು ಪುಣೆ ಮೂಲದ ಎಸ್‌ಐಐ ಅನ್ನು ಸಂಪರ್ಕಿಸುವಂತೆ ಕೇಂದ್ರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಬ್ರಿಟನ್ ಗೆ ರವಾನಿಸಬೇಕಿದ್ದ ಈ ಲಸಿಕೆಗಳ ಲೇಬಲ್ ಕೋವಿಶೀಲ್ಡ್ ಎಂದು ಇಲ್ಲ. ಬದಲಿಗೆ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಎಂದು ನಮೂದಾಗಿದೆ.