ನವದೆಹಲಿ :ಪಾಕ್‌ನ ಅನುದಾನಿತ ನಕಲಿ ಸುದ್ದಿ ಜಾಲಗಳ ವಿರುದ್ಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಸಮರ ಸಾರಿದೆ. ಪಾಕ್ ಮೂಲದ 35 ಯೂಟ್ಯೂಬ್ ಚಾನೆಲ್‌ಗಳು, ಎರಡು ಟ್ವಿಟರ್, ಎರಡು ಇನ್‌ಸ್ಟಾಗ್ರಾಂ ಖಾತೆಗಳು ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್, ಈ ಯೂಟ್ಯೂಬ್ ಚಾನೆಲ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಐಟಿ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ:ಕಾಂಗ್ರೆಸ್ ಬಂಡಾಯ ಶಾಸಕಿಗೆ ಬಿಜೆಪಿ ಟಿಕೆಟ್.. ರಾಯ್ಬರೇಲಿ ಕ್ಷೇತ್ರದಿಂದ ಅದಿತಿ ಸ್ಪರ್ಧೆ..
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, 35 ಯೂಟ್ಯೂಬ್ ಚಾನೆಲ್‌ಗಳು, ಎರಡು ಟ್ವಿಟರ್ ಖಾತೆಗಳು, ಎರಡು ಇನ್‌ಸ್ಟಾಗ್ರಾಂ ಹ್ಯಾಂಡಲ್, ಎರಡು ವೆಬ್‌ಸೈಟ್‌ಗಳು ಮತ್ತು ಒಂದು ಫೇಸ್‌ಬುಕ್ ಖಾತೆ ಸೇರಿವೆ. ಇವುಗಳ ಮೂಲಕ ಭಾರತ ವಿರೋಧಿ ಪ್ರಚಾರ ಮಾಡಲಾಗುತ್ತಿತ್ತು.
ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿ ಪಡೆದುಕೊಂಡ ನಂತರ ಈ ಕ್ರಮಕೈಗೊಳ್ಳಲಾಗಿದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಯೂಟ್ಯೂಬ್ ಚಾನೆಲ್ 1.2 ಕೋಟಿ ಚಂದಾದಾರರನ್ನ ಹೊಂದಿದ್ದು, ಶೇರ್ ಮಾಡಲಾಗಿರುವ ವಿಡಿಯೋ 130 ಕೋಟಿಗೂ ಅಧಿಕ ವೀಕ್ಷಣೆಯಾಗಿವೆ. ಎಲ್ಲವೂ ಪಾಕಿಸ್ತಾನದಿಂದಲೇ ಕಾರ್ಯನಿರ್ವಹಿಸಿವೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ಕಳೆದ ಕೆಲ ವಾರಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ನಲ್ಲಿ ಹುತಾತ್ಮರಾದ ಬಿಪಿನ್ ರಾವತ್ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಬಿಂಬಿಸಿರುವ ವಿಡಿಯೋ ಕೂಡ ಇದರಲ್ಲಿ ಹರಿದಾಡಿದೆ. ಇದರ ಜೊತೆಗೆ ಭಾರತೀಯ ಸಶಸ್ತ್ರ ಪಡೆ, ಜಮ್ಮು-ಕಾಶ್ಮೀರ ವಿಚಾರ ಸೇರಿದಂತೆ ಅನೇಕ ಭಾರತ ವಿರೋಧಿ ವಿಷಯಗಳು ಯೂಟ್ಯೂಬ್ನಲ್ಲಿ ಪ್ರಸಾರಗೊಂಡಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ