ಸಂಗಾರೆಡ್ಡಿ (ತೆಲಂಗಾಣ):ಇಲ್ಲಿನ ವೆಂಕಟಾಪುರ ಗ್ರಾಮದ ಹೊರವಲಯದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಮೃತದೇಹ ಕಾರಿನಲ್ಲಿ ದಹನವಾದ ರೀತಿಯಲ್ಲಿ ದೊರೆತಿದೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದರೊಳಗೆ ಅಧಿಕಾರಿಯ ಶವ ಕೂಡ ಬೆಂಕಿಗೆ ದಹಿಸಿದೆ. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸರ್ಕಾರಿ ಅಧಿಕಾರಿಯ ಶವ ಪತ್ತೆ! - Government Officer died in Telangana
ತೆಲಂಗಾಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಕಾರಿನಲ್ಲಿ ಸುಟ್ಟು ಹೋದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತೆಲಂಗಾಣ ಅಧಿಕಾರಿ ಕಾರಿನಲ್ಲಿ ದಹನ
ಈ ಅಧಿಕಾರಿಯನ್ನು ಹೈದರಾಬಾದ್ನ ರಾಜ್ಯ ಸಚಿವಾಲಯದ ಸಹಾಯಕ ಸೆಕ್ಷನ್ ಆಫೀಸರ್ ಎಂದು ಗುರುತಿಸಲಾಗಿದೆ. ಮೇದಕ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ಥಳೀಯ ಪೊಲೀಸರು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ಕ್ಷಮಿಸಿ ಮಮ್ಮಿ ನಾವು ನಮ್ಮ ಆಸೆಯಂತೆ ಆತ್ಮಹತ್ಯೆ ಮಾಡಿಕೊಂಡಿದ್ದೇವೆ: ಸಾಮೂಹಿಕ ಆತ್ಮಹತ್ಯೆ