ಮುಂಬೈ:ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅನೇಕ ಕೋವಿಡ್ ಕೇಂದ್ರಗಳನ್ನು ಮತ್ತೆ ತೆರೆಯಲಾಗಿದೆ. ಜನರು ಹೀಗೆ ನಿರ್ಲಕ್ಷ್ಯ ಮಾಡುತ್ತಿದ್ದರೆ ಇನ್ನೂ ಕೆಲ ಪ್ರದೇಶಗಳಲ್ಲಿ ಲಾಕ್ಡೌನ್ ಹೇರುವುದು ಅನಿವಾರ್ಯವಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಹೇಳಿದ್ದಾರೆ.
ರಾಜ್ಯದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಸಾಮಾಜಿಕ ಅಂತರ ಸೇರಿದಂತೆ ಜನರು ಕೋವಿಡ್ ನಿಯಮಗಳನ್ನ ಪಾಲಿಸುತ್ತಿಲ್ಲ. ನಾವು ಯಾವ ಹೊಸ ಕೇಸ್ಗಳನ್ನೂ ಮುಚ್ಚಿಡುತ್ತಿಲ್ಲ, ಎಲ್ಲವನ್ನೂ ಐಸಿಎಂಆರ್ನಲ್ಲಿ ದಾಖಲಿಸುತ್ತಿದ್ದೇವೆ. ಇಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯೊಂದಿಗೆ ಚರ್ಚಿಸಿ ಕೆಲ ಪ್ರದೇಶದಲ್ಲಿ ಲಾಕ್ಡೌನ್ ಜಾರಿ ತರುವ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ದಯವಿಟ್ಟು ಸಾರ್ವಜನಿಕರು ಸೋಂಕು ಹರಡುವಿಕೆ ತಡೆಗಟ್ಟಲು ಸಹಕರಿಸಿ ಎಂದು ರಾಜೇಶ್ ತೋಪೆ ಮನವಿ ಮಾಡಿದ್ದಾರೆ.