ಮಲಪ್ಪುರಂ( ಕೇರಳ):ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ನ್ಯಾಯಾಂಗ ಮೇಲೆ ತನ್ನ ಭಾವನೆಗಳನ್ನ ಹಾಗೂ ಇಚ್ಛಾಶಕ್ತಿಗಳನ್ನು ಹೇರುತ್ತಿದೆ. ನ್ಯಾಯಾಂಗ ಸ್ವತಂತ್ರವಾಗಿ ತನ್ನ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ಕೊಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲಪ್ಪುರಂನಲ್ಲಿ ಮಾತನಾಡಿದ ಅವರು, ಆಯ್ಕೆ ಆದ ಸರ್ಕಾರಗಳನ್ನ ಕೇಂದ್ರ ಸರ್ಕಾರ ತನ್ನ ಅಧಿಕಾರ ಬಳಸಿ ಪದೇ ಪದೆ ಕೆಡವುತ್ತಿದೆ ಎಂದು ದೂರಿದ್ದಾರೆ. ಗೆಲ್ಲುವುದು ಎಂದರೆ ಇಲ್ಲಿ ಸೋಲು ಅಂತಾನೆ ಅರ್ಥ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೀದಿಗಿಳಿದ ಶಿಕ್ಷಕರು: ಖಾಸಗಿ ಶಾಲಾ ಮಕ್ಕಳಿಗಿಲ್ಲ ಪಾಠ ಪ್ರವಚನ