ಕರ್ನಾಟಕ

karnataka

ETV Bharat / bharat

ಸುಧಾರಣೆ, ನಿರ್ವಹಣೆ, ರೂಪಾಂತರ ತತ್ವಕ್ಕೆ ಸರ್ಕಾರ ಬದ್ಧವಾಗಿದೆ: ಮೋದಿ

ಐಐಟಿಗಳ ಬ್ರ್ಯಾಂಡ್ ಬಲಶಾಲಿಯಾಗಿದೆ, ನಾವು ಭಾರತದಲ್ಲಿ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣವನ್ನು ಬಲಪಡಿಸಲು ಬದ್ಧವಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

PM Modi
ಪ್ರಧಾನಿ ಮೋದಿ

By

Published : Dec 5, 2020, 4:37 AM IST

ನವದೆಹಲಿ:ಸುಧಾರಣೆ, ನಿರ್ವಹಣೆ ಮತ್ತು ರೂಪಾಂತರ ತತ್ವಕ್ಕೆ ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಐಐಟಿ 2020 ಜಾಗತಿಕ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಸರ್ಕಾರ ಸುಧಾರಣೆ, ನಿರ್ಹಣೆ ಮತ್ತು ರೂಪಾಂತರ ತತ್ವಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ಸುಧಾರಣೆಗಳಿಂದ ಯಾವುದೇ ವಲಯವನ್ನು ಕೈ ಬಿಡುವುದಿಲ್ಲ ಎಂದಿದ್ದಾರೆ.

"ಈ ರೀತಿಯ ಕಾರ್ಯಕ್ರಮಗಳು 5-6 ಐಐಟಿಗಳ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು, ಆದರೆ ಇಂದು ಈ ಸಂಖ್ಯೆ 2 ಡಜನ್‌ಗಳಷ್ಟಿದೆ. ಐಐಟಿಗಳ ಬ್ರ್ಯಾಂಡ್ ಬಲಶಾಲಿಯಾಗಿದೆ, ನಾವು ಭಾರತದಲ್ಲಿ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣವನ್ನು ಬಲಪಡಿಸಲು ಬದ್ಧವಾಗಿದೆ "ಎಂದು ಹೇಳಿದ್ದಾರೆ.

"ನಾವು ಆಗ್ನೇಯ ಏಷ್ಯಾ ಮತ್ತು ಯುರೋಪಿನ ವಿವಿಧ ದೇಶಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಯುವಕರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಜಾಗತಿಕವಾಗಿ ಉತ್ತಮ ಅಭ್ಯಾಸಗಳಿಂದ ಕಲಿಯಲು ಅಂತಾರಾಷ್ಟ್ರೀಯ ವೇದಿಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಉದ್ದೇಶ" ಎಂದು ಪ್ರಧಾನಿ ಹೇಳಿದ್ದಾರೆ.

ABOUT THE AUTHOR

...view details