ನವದೆಹಲಿ:ಪ್ಯಾನ್ ಕಾರ್ಡ್ನ್ನು ಆಧಾರ್‌ನೊಂದಿಗೆ ಜೋಡಿಸುವ ಗಡುವನ್ನು 2021ರ ಸೆಪ್ಟೆಂಬರ್ 30 ರವರೆಗೆ ಅಂದರೆ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಹಿಂದಿನ ಗಡುವು ಜೂನ್ 30 ಆಗಿತ್ತು. ಟ್ವಿಟರ್ ಮೂಲಕ ನಿರ್ಧಾರವನ್ನು ಪ್ರಕಟಿಸಿದ ಎಂಒಎಸ್ ಹಣಕಾಸು ಸಚಿವ ಅನುರಾಗ್ ಠಾಕೂರ್, ಆದಾಯ ತೆರಿಗೆ ಪಾವತಿದಾರರಿಗೆ ಪರಿಹಾರ ಒದಗಿಸಿ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ಯಾನ್ ಕಾರ್ಡ್ನ್ನು ಆಧಾರ್‌ನೊಂದಿಗೆ ಜೋಡಿಸಲು ಮೂರು ತಿಂಗಳವರೆಗೆ ಅವಕಾಶ ನೀಡಿದೆ.
ಪ್ಯಾನ್ ಅಂದರೆ ಹತ್ತು-ಅಂಕಿಗಳ ಆಲ್ಫಾನ್ಯೂಮರಿಕ್ ಐಡೆಂಟಿಫೈಯರ್ ಆಗಿದೆ. ಇದನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ. ಪ್ರತಿ ಮೌಲ್ಯಮಾಪಕರಿಗೆ (ವೈಯಕ್ತಿಕ, ಸಂಸ್ಥೆ, ಕಂಪನಿ, ಇತ್ಯಾದಿ) ಒಂದು ವಿಶಿಷ್ಟವಾದ ಪ್ಯಾನ್ ನೀಡಲಾಗುತ್ತದೆ. ಆದರೆ ಆಧಾರ್ ಸಂಖ್ಯೆ ಯುಐಡಿಎಐ ಭಾರತ ನಿವಾಸಿಗಳಿಗೆ ನೀಡುವ 12 ಸಂಖ್ಯೆಯಾಗಿದೆ.
ಪ್ರಸ್ತುತ, ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಬ್ಯಾಂಕ್ ಖಾತೆಗಳಲ್ಲಿ ನಗದು ಠೇವಣಿ, ಡಿಮ್ಯಾಟ್ ಖಾತೆಗಳನ್ನು ತೆರೆಯುವುದು, ಸ್ಥಿರ ಆಸ್ತಿಗಳ ವಹಿವಾಟು ಮತ್ತು ಸೆಕ್ಯೂರಿಟಿಗಳಲ್ಲಿ ವ್ಯವಹರಿಸುವುದು ಸೇರಿದಂತೆ ಹಲವಾರು ಹಣಕಾಸಿನ ವಹಿವಾಟುಗಳನ್ನು ಪಡೆಯಲು ಪ್ಯಾನ್ ಕಡ್ಡಾಯವಾಗಿದೆ. ಆಧಾರ್ ಬಯೋಮೆಟ್ರಿಕ್ ಆಧಾರಿತವಾಗಿದೆ. ಬೇರೆ ಯಾವುದೇ ಗುರುತಿನ ದಾಖಲೆಯ ಆಧಾರದ ಮೇಲೆ ಪಡೆಯಲಾಗುವುದಿಲ್ಲ. ಎರಡನ್ನೂ ಲಿಂಕ್ ಮಾಡುವುದು ತೆರಿಗೆ ಆಡಳಿತಕ್ಕೆ ನಿರ್ಣಾಯಕವೆಂದು ಪರಿಗಣಿಸಲಾಗಿದೆ.