ಕರ್ನಾಟಕ

karnataka

ETV Bharat / bharat

OFB ಖಾಸಗೀಕರಣ ಕೈಬಿಡಿ: ಪ್ರಧಾನಿಗೆ ಪತ್ರ ಬರೆದ ಸರ್ಕಾರಿ ನೌಕರರ ರಾಷ್ಟ್ರೀಯ ಒಕ್ಕೂಟ

OFB​ ಉತ್ಪಾದನಾ ಘಟಕಗಳ ಖಾಸಗೀಕರಣಕ್ಕೆ ಸರ್ಕಾರಿ ನೌಕರರ ರಾಷ್ಟ್ರೀಯ ಒಕ್ಕೂಟವು ವಿರೋಧ ವ್ಯಕ್ತಪಡಿಸಿದ್ದು, ನಿರ್ಧಾರ ಕೈ ಬಿಡುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದೆ.

ಪ್ರಧಾನಿ
ಪ್ರಧಾನಿ

By

Published : Jul 11, 2021, 1:23 PM IST

ನವದೆಹಲಿ: ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್‌ಬಿ) ನ ಉತ್ಪಾದನಾ ಘಟಕಗಳನ್ನು ಖಾಸಗೀಕರಣಗೊಳಿಸದಂತೆ ಒತ್ತಾಯಿಸಿ ಸರ್ಕಾರಿ ನೌಕರರ ರಾಷ್ಟ್ರೀಯ ಒಕ್ಕೂಟವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ. ಜೂನ್ 16 ರಂದು ನಡೆದ ಸಂಪುಟ ಸಭೆಯಲ್ಲಿ ಒಎಫ್​ಬಿ ಘಟಕಗಳನ್ನು ಖಾಸಗೀಕರಣಗೊಳಿಸಲು ಸಂಪುಟ ಸಭೆ ನಿರ್ಧರಿಸಿತ್ತು.

1775 ರಲ್ಲಿ ಬ್ರಿಟಿಷರು ಸ್ಥಾಪಿಸಿದ OFBಯ ಅಂಶಗಳ ಪ್ರಕಾರ ಉತ್ಪಾದಕ ಮತ್ತು ಲಾಭದಾಯಕ ಸ್ವತ್ತುಗಳಾಗಿ ಪುನರ್​​ರಚಿಸಲು ಕ್ಯಾಬಿನೆಟ್ ನಿರ್ಧರಿಸಿತು. ಭಾರತೀಯ ಸಶಸ್ತ್ರ ಪಡೆ, ಅರೆಸೈನಿಕ ಪಡೆ, ರಾಜ್ಯ ಪೊಲೀಸ್ ಪಡೆ ಸೇರಿದಂತೆ ಏಳು ರಕ್ಷಣಾ ಪಡೆಗಳನ್ನು ಖಾಸಗಿ ಒಡೆತನಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವ ಮುನ್ನ ಪಾಲುದಾರ ನೌಕರರ ಒಕ್ಕೂಟಗಳೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂಬುದನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆತ್ಮನಿರ್ಭರ್​ ಭಾರತದ ಗುರಿ ಸಾಧಿಸಲು ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ, ಈ ನಿರ್ಧಾರ ಕೈಬಿಡಿ ಎಂದು ಒಕ್ಕೂಟ ಒತ್ತಾಯಿಸಿದೆ.

1947 ರ ಬಳಿಕ ಸುಗ್ರೀವಾಜ್ಞೆ ಮೂಲಕ ಕಾರ್ಖಾನೆಗಳ ಮೇಲೆ ಭಾರತ ಸರ್ಕಾರ ಹಿಡಿತ ಸಾಧಿಸಿದೆ. 1962 ರಲ್ಲಿ ನಡೆದ ಯುದ್ಧದಲ್ಲಿ ಚೀನಾ ಸೋಲನುಭವಿಸಿದ್ದು, ಈ ಕೈಗಾರಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿತು. ಆದರೆ, 1971 ರಲ್ಲಿ ನಡೆದ ಯುದ್ಧದಲ್ಲಿ ಈ ಉತ್ಪಾದನಾ ಘಟಕಗಳು ತಮ್ಮ ಶಕ್ತಿ ಪ್ರದರ್ಶಿಸಿದವು.

ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿಯು ಜುಲೈ 2020 ರಲ್ಲಿ OFB ಯನ್ನು ಕಾರ್ಪೊರೇಟ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಇದನ್ನು ಒಂದು ಅಥವಾ ಹೆಚ್ಚಿನ ಸರ್ಕಾರಿ ಸ್ವಾಮ್ಯದ ಕಾರ್ಪೊರೇಟ್ ಘಟಕಗಳಾಗಿ ಪರಿವರ್ತಿಸಲು ನಿರ್ಧರಿಸಲಾಯಿತು. ಅದರ ಸ್ವಾಯತ್ತತೆ, ಹೊಣೆಗಾರಿಕೆ ಮತ್ತು ಸುಗ್ರೀವಾಜ್ಞೆ, ದಕ್ಷತೆಯನ್ನು ಸುಧಾರಿಸುವುದು ಇದರ ಉದ್ದೇಶವಾಗಿತ್ತು. ವರದಿಗಳ ಪ್ರಕಾರ, ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಕೇಂದ್ರವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ABOUT THE AUTHOR

...view details