ಕರ್ನಾಟಕ

karnataka

ETV Bharat / bharat

ಅಗ್ನಿಪಥ್​ ಜಾರಿ ಮಾಡಿ ಸರ್ಕಾರ ಯುವಕರ ಕನಸುಗಳನ್ನ ನಾಶ ಮಾಡ್ತಿದೆ; ರಾಹುಲ್​ ಗಾಂಧಿ - ಅಗ್ನಿಪಥ್​

ಅಗ್ನಿಪಥ ಯೋಜನೆ ಬಗ್ಗೆ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಂಪಾರಣ್​​​ನಿಂದ ದೆಹಲಿಗೆ ಬಂದ ಯುವಕರನ್ನು ಭೇಟಿ ಮಾಡಿ ಅವರು ಮಾತನಾಡಿದ್ದಾರೆ.

govt-destroyed-dreams-of-youths-with-agnipath-scheme-rahul-gandhi
ಅಗ್ನಿಪಥ್​ ಜಾರಿ ಮಾಡಿ ಸರ್ಕಾರ ಯುವಕ ಕನಸುಗಳನ್ನ ನಾಶ ಮಾಡ್ತಿದೆ; ರಾಹುಲ್​ ಗಾಂಧಿ

By PTI

Published : Dec 27, 2023, 7:37 AM IST

Updated : Dec 27, 2023, 9:01 AM IST

ನವದೆಹಲಿ:ಕೇಂದ್ರ ಸರ್ಕಾರ ಅಗ್ನಿಪಥ್ ನೇಮಕಾತಿ ಯೋಜ ಜಾರಿ ಮಾಡುವ ಮೂಲಕ ಲಕ್ಷಾಂತರ ಯುವಕರ ಕನಸುಗಳನ್ನು ಸರ್ವನಾಶ ಮಾಡುತ್ತಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಈ ಬಗ್ಗೆ ಮಾತನಾಡಿರುವ ಅವರು. ನಿರುದ್ಯೋಗದ ವಿರುದ್ಧ ಬೀದಿಯಿಂದ ಸಂಸತ್​ ವರೆಗೂ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ವೊಂದನ್ನು ಹಾಕಿದ್ದು, ಇದರಲ್ಲಿ ರಾಹುಲ್​ ಗಾಂಧಿ ಯುವಕರ ಗುಂಪಿನೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಎಲ್ಲ ಯುವಕರು ಬಿಹಾರದ ಚಂಪಾರಣ್​ನಿಂದ ಬಂದ ಯುವಕರಾಗಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿಕೊಂಡಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸಲು "ತಾತ್ಕಾಲಿಕ ನೇಮಕಾತಿ" ಮಾಡಿಕೊಳ್ಳಲಾದ ಯೋಜನೆಯೇ ಈ ಅಗ್ನಿವೀರ್ ಆಗಿದೆ. ಅಗ್ನಿವೀರ್​ ಯೋಜನೆ ಜಾರಿಗೆ ತರುವ ಮೂಲಕ ಭೂ ಸೇನೆ ಮತ್ತು ಭಾರತೀಯ ವಾಯುಪಡೆಯ ಖಾಯಂ ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಹೀಗೆ ಸರ್ಕಾರವು ಅಸಂಖ್ಯಾತ ಯುವಕರ ಕನಸುಗಳನ್ನು ನಾಶಪಡಿಸಿದೆ ಎಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ರಾಹುಲ್​ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸತ್ಯಾಗ್ರಹದ ನಾಡು’ ಚಂಪಾರಣ್‌ನಿಂದ ದೆಹಲಿಗೆ ಬರಲು 1,100 ಕಿಲೋಮೀಟರ್‌ಗಳಷ್ಟು ಹಾದಿಯನ್ನು ಕಾಲ್ನಡಿಗೆಯಲ್ಲಿ ಸವೆಸಿರುವ ಯುವಕರ ಈ ದಿಟ್ಟ ಹೋರಾಟವನ್ನು ಮಾಧ್ಯಮಗಳು ಕವರ್​​ ಮಾಡದೇ ಇರುವುದು ಬೇಸರದ ಸಂಗತಿ ಎಂದು ಸಹ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

"ಉದ್ಯೋಗದ ಸಮಸ್ಯೆಯನ್ನು ಬೀದಿಗಳಿಂದ ಸಂಸತ್ತಿನವರೆಗೆ ಎಳೆದು ತಂದು ಹೋರಾಟ ನಡೆಸುವ ಯುವಕರೊಂದಿಗೆ ನಾವು ಇದ್ದೇವೆ" ಎಂದು ರಾಹುಲ್​ ಗಾಂಧಿ ಅಭಯ ನೀಡಿದ್ದಾರೆ. ಜೂನ್ 14, 2022 ರಂದು ಘೋಷಿಸಲಾದ ಅಗ್ನಿಪಥ್ ಯೋಜನೆಯು 17- 21 ವರ್ಷ ವಯಸ್ಸಿನ ಯುವಕರನ್ನು ಕೇವಲ ನಾಲ್ಕು ವರ್ಷಗಳವರೆಗೆ ನೇಮಕ ಮಾಡಿಕೊಳ್ಳಲು ಅವಕಾಶ ಒದಗಿಸುತ್ತದೆ. ಹೀಗೆ ನಾಲ್ಕು ವರ್ಷಗಳ ಸೇವೆ ಬಳಿಕ ಶೇಕಡಾ 25 ರಷ್ಟು ಯುವಕರು 15ವರ್ಷಗಳ ಸೇನಾ ಸೇವೆಯಲ್ಲಿ ಉಳಿಸಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಆದರೆ ಉಳಿದ ಶೇ 75ರಷ್ಟು ಅಗ್ನಿವೀರರು ನಾಲ್ಕು ವರ್ಷಗಳ ಬಳಿಕ ಸೇವೆಯಿಂದ ಹೊರ ಬರಬೇಕಾಗುತ್ತದೆ. ಈ ನಿಯಮಕ್ಕೆ ಆರಂಭದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಬಿಹಾರ ಮತ್ತು ಹೈದರಾಬಾದ್​ನಲ್ಲಿ ಈ ಸಂಬಂಧ ಭಾರಿ ಪ್ರತಿಭಟನೆ ಕೂಡಾ ನಡೆದಿತ್ತು.

ಇದನ್ನು ಓದಿ:ಡಿಕೆಶಿ ಮುಂದೊಂದು ದಿನ ಸಿಎಂ; ಮೋದಿ ಮತ್ತೊಮ್ಮೆ ಪ್ರಧಾನಿ: ರಾಜಗುರು ದ್ವಾರಕನಾಥ್ ಭವಿಷ್ಯ

Last Updated : Dec 27, 2023, 9:01 AM IST

ABOUT THE AUTHOR

...view details