ನವದೆಹಲಿ: ಕೊರೊನಾ ವೈರಸ್ ಅಬ್ಬರ ಇನ್ನೂ ಮುಗಿದಿಲ್ಲ. ಆದರೆ ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರವು ನಿರ್ಲಕ್ಷ್ಯ ವಹಿಸಿದೆ ಮತ್ತು ಅತಿಯಾದ ವಿಶ್ವಾಸವನ್ನು ಹೊಂದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
''ದಕ್ಷಿಣ ಆಫ್ರಿಕಾದ ಮತ್ತು ಬ್ರೆಜಿಲ್ನ ಹೊಸ ರೂಪಾಂತರ ಕೊರೊನಾ ವೈರಸ್ ಭಾರತಕ್ಕೆ ಪ್ರವೇಶಿಸಿವೆ ಎಂದು ವರದಿಯಾದ ನಂತರ ಈ ಅಭಿಪ್ರಾಯಗಳು ದೇಶದಲ್ಲಿ ವ್ಯಕ್ತವಾಗಿವೆ. ಕೋವಿಡ್ -19 ಬಗ್ಗೆ ತೀವ್ರ ನಿರ್ಲಕ್ಷ್ಯ ಮತ್ತು ಅತಿಯಾದ ವಿಶ್ವಾಸವನ್ನು ಭಾರತ ಸರ್ಕಾರ ಹೊಂದಿದೆ. ಇದು ಇನ್ನೂ ಮುಗಿದಿಲ್ಲ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.