ನವದೆಹಲಿ:ಭಾರತ್ ಬಯೋಟೆಕ್ನ ಅಂಕಲೇಶ್ವರದ ಕೋವ್ಯಾಕ್ಸಿನ್ ಉತ್ಪಾದನಾ ಘಟಕದಲ್ಲಿ ಲಸಿಕೆ ತಯಾರಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಈ ಸಂಬಂಧ ಅವರು ಟ್ವೀಟ್ ಮಾಡಿದ್ದು, ಗುಜರಾತ್ನ ಅಂಕಲೇಶ್ವರದ ಲಸಿಕಾ ಉತ್ಪಾದನಾ ಘಟಕದಲ್ಲಿ ಕೋವಿಡ್ ತಡೆಗಟ್ಟುವ ಸಾಮರ್ಥ್ಯ ಹೊಂದಿರುವ ಕೋವ್ಯಾಕ್ಸಿನ್ ತಯಾರಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈ ಅನುಮೋದನೆಯಿಂದ ದೇಶದಲ್ಲಿ ಇರುವ ಕೋವಿಡ್ ಹೋಗಲಾಡಿಸಲು ಇದು ಸಹಕಾರಿ ಆಗಲಿದೆ. ಅಷ್ಟೇ ಅಲ್ಲ ಲಸಿಕೆ ಪೂರೈಕೆಯಲ್ಲೂ ಹೆಚ್ಚಳವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.