ಕರ್ನಾಟಕ

karnataka

ETV Bharat / bharat

ಕೋವಿಡ್​ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ನೆರವಿನ ಹಸ್ತ.. - ಕೋವಿಡ್​ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ನೆರವಿನ ಹಸ್ತ..!

ಗರಿಷ್ಠ ವಿಮಾ ಲಾಭದ ಮೊತ್ತವನ್ನು 6 ಲಕ್ಷದಿಂದ 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ, ಮತ್ತು ಕನಿಷ್ಠ 2.5 ಲಕ್ಷ ರೂ.ಗಳ ವಿಮಾ ಸೌಲಭ್ಯವನ್ನು ಮರು ಸ್ಥಾಪಿಸಲಾಗಿದೆ..

ಕೇಂದ್ರ ನೆರವಿನ ಹಸ್ತ
ಕೇಂದ್ರ ನೆರವಿನ ಹಸ್ತ

By

Published : May 29, 2021, 10:11 PM IST

ನವದೆಹಲಿ :ಕೋವಿಡ್​ನಿಂದ ಮೃತಪಟ್ಟವರ ಕುಟುಂಬಗಳಿಗೆ ಪಿಂಚಣಿ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕುಟುಂಬ ಪಿಂಚಣಿಗಳಲ್ಲದೆ, ನೌಕರರ ಠೇವಣಿ-ಸಂಬಂಧಿತ ವಿಮೆ (ಇಡಿಎಲ್ಐ) ಯೋಜನೆಯಡಿ ವಿಮಾ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ.

ಈ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ತೊಂದರೆಗಳನ್ನು ತಗ್ಗಿಸಲು ಈ ಕ್ರಮಗಳು ಸಹಾಯ ಮಾಡುತ್ತವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಈ ಕುಟುಂಬಗಳು ಉತ್ತಮ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಉದ್ಯೋಗ-ಸಂಬಂಧಿತ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದ ನೌಕರರ ರಾಜ್ಯ ವಿಮಾ ನಿಗಮದ (ಇಎಸ್ಐಸಿ) ಪಿಂಚಣಿ ಯೋಜನೆಯ ಲಾಭವನ್ನು ಕೋವಿಡ್‌ನಿಂದ ಮೃತಪಟ್ಟವರಿಗೂ ವಿಸ್ತರಿಸಲಾಗುತ್ತಿದೆ.

ಮೃತ ವ್ಯಕ್ತಿಯು ಪಡೆಯುತ್ತಿದ್ದ ದೈನಂದಿನ ವೇತನದ ಶೇ.90ರಷ್ಟನ್ನು ಪಿಂಚಣಿಯಾಗಿ ಅವರ ಕುಟುಂಬಗಳಿಗೆ ನೀಡಲಾಗುತ್ತದೆ. ಈ ಯೋಜನೆಯು 2020 ರ ಮಾರ್ಚ್ 24 ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದ್ದು, 2022ರ ಮಾರ್ಚ್ 22ರವರೆಗೆ ಸಂಭವಿಸುವ ಎಲ್ಲಾ ಪ್ರಕರಣಗಳಿಗೆ ಅನ್ವಯಿಸುತ್ತದೆ.

ಗರಿಷ್ಠ ವಿಮಾ ಲಾಭದ ಮೊತ್ತವನ್ನು 6 ಲಕ್ಷದಿಂದ 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ, ಮತ್ತು ಕನಿಷ್ಠ 2.5 ಲಕ್ಷ ರೂ.ಗಳ ವಿಮಾ ಸೌಲಭ್ಯವನ್ನು ಮರು ಸ್ಥಾಪಿಸಲಾಗಿದೆ.

ಇದನ್ನೂ ಓದಿ:ಕೋವಿಡ್​ ಬಿಕ್ಕಟ್ಟು ನಿರ್ವಹಣೆಯಲ್ಲಿ ರಾಹುಲ್​ಗಿಂತ ಮೋದಿ ಬೆಸ್ಟ್.. ಸಿ-ವೋಟರ್ ಸಮೀಕ್ಷೆ ಬಹಿರಂಗ

ಈ ಯೋಜನೆಗಳ ವಿವರವಾದ ಮಾರ್ಗಸೂಚಿಗಳನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೊರಡಿಸುತ್ತಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಕೋವಿಡ್​ನಿಂದ ತತ್ತರಿಸಿರುವ ಕುಟುಂಬಗಳ ನೆರವಿಗೆ ಸರ್ಕಾರ ಜತೆಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details