ನವದೆಹಲಿ:ಕರ್ನಾಟಕ, ಪಂಜಾಬ್, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ರಾಜ್ಯಪಾಲರು (PM Modi meets Governors) ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಕೆಲ ಹೊತ್ತು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಪಂಜಾಬ್ ರಾಜ್ಯಪಾಲ ಬನ್ವರ್ಲಾಲ್ ಪುರೋಹಿತ್, ರಾಜಸ್ಥಾನ ಗವರ್ನರ್ ಕಲರಾಜ್ ಮಿಶ್ರಾ, ಕರ್ನಾಟಕದ ರಾಜ್ಯಪಾಲ ತಾವರ್ಚಂದ್ ಗೆಹ್ಲೊಟ್ ಪ್ರಧಾನಿ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಸ್ಮರಣಿಕೆ ನೀಡಿದರು.
ಇದಕ್ಕೂ ಮೊದಲು ಬಿಹಾರ ರಾಜ್ಯಪಾಲರಾದ ಪಾಘು ಚೌಹಾನ್ ಹಾಗೂ ಛತ್ತೀಸ್ಗಢ ಗವರ್ನರ್ ಅನ್ಸೂಯಾ ಯುಕಿಯಾ ಪ್ರಧಾನಿ ಮೋದಿ ಭೇಟಿ ಮಾಡಿ, ಮಾತುಕತೆ ನಡೆಸಿದರು.