ಕರ್ನಾಟಕ

karnataka

ETV Bharat / bharat

ರಾಜ್ಯಪಾಲರು ಸರ್ಕಾರಕ್ಕೆ 'ಸ್ನೇಹಿತ, ತತ್ವಜ್ಞಾನಿ, ಮಾರ್ಗದರ್ಶಿ': ರಾಷ್ಟ್ರಪತಿ ಕೋವಿಂದ್​​ - ರಾಷ್ಟ್ರಪತಿ ಕೋವಿಂದ್​​

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಗುರಿಗಳನ್ನು ಸಾಧಿಸುವುದು, ಜನರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವಲ್ಲಿ ರಾಜ್ಯಪಾಲರ ಪಾತ್ರವು ಬಹಳ ಮುಖ್ಯವಾಗಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು.

ರಾಷ್ಟ್ರಪತಿ ಕೋವಿಂದ್​​
ರಾಷ್ಟ್ರಪತಿ ಕೋವಿಂದ್​​

By

Published : Nov 11, 2021, 4:35 PM IST

ನವದೆಹಲಿ: ರಾಜ್ಯಪಾಲರು ಜನರಿಗೆ ಮತ್ತು ಸರಕಾರಕ್ಕೆ "ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕ"(Friend, Philosopher and Guide) ಎಂದು ರಾಷ್ಟ್ರಪತಿಗಳು (President Ramnath Kovind ) ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ರಾಜ್ಯಗಳಲ್ಲಿ ಸಾಧ್ಯವಾದಷ್ಟು ಸಮಯವನ್ನು ನೀಡುವಂತೆ ಮತ್ತು ಸಾರ್ವಜನಿಕರೊಂದಿಗೆ ಉತ್ಸಾಹಭರಿತ ಸಂಪರ್ಕವನ್ನು ಹೊಂದುವಂತೆ ಅವರು ರಾಜ್ಯಪಾಲರುಗಳಿಗೆ ಸಲಹೆ ನೀಡಿದ್ದಾರೆ.

ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ಒಂದು ದಿನದ ಸಮಾವೇಶವನ್ನು (Day-long conference of Governors and Lieutenant Governors) ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನರ ಕಲ್ಯಾಣ ಮತ್ತು ಸೇವೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಪಾಲರು ಬದ್ಧರಾಗಿರುತ್ತಾರೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಮತ್ತು ರಾಷ್ಟ್ರೀಯ ಗುರಿಗಳನ್ನು ಸಾಧಿಸುವಲ್ಲಿ, ಜನರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವಲ್ಲಿ ರಾಜ್ಯಪಾಲರ ಪಾತ್ರವು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: 'ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ, 1947ರಲ್ಲಿ ಸಿಕ್ಕಿದ್ದು ಭಿಕ್ಷೆ': ಕಂಗನಾ ಹೇಳಿಕೆಗೆ ವರುಣ್ ಗಾಂಧಿ ಕಿಡಿ

ಮೋದಿಯವರ (Narendra Modi) ನಾಯಕತ್ವದಲ್ಲಿ ನಡೆದ ಕೊರೊನಾ ರೋಗದ ವಿರುದ್ಧದ ದೇಶದ ಹೋರಾಟವನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು. ಇದೇ ವೇಳೆ, ರಾಜ್ಯಪಾಲರ ಪಾತ್ರವನ್ನು ಒತ್ತಿ ಹೇಳಿದರು. ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ರಾಜ್ಯಪಾಲರು ಸಕ್ರಿಯ ಕೊಡುಗೆ ನೀಡಿರುವುದು ತೃಪ್ತಿಯ ವಿಷಯವಾಗಿದೆ. ನಮ್ಮ ಎಲ್ಲಾ ಕೊರೊನಾ ಯೋಧರು ಅಸಾಧಾರಣ ತ್ಯಾಗ ಮತ್ತು ಸಂಕಲ್ಪದಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ ಎಂದು ಹೊಗಳಿದರು.

ಇಂದು 108 ಕೋಟಿ ಲಸಿಕೆಗಳನ್ನು ಹಾಕುವ ಮೂಲಕ ನಾವು ದೇಶವನ್ನು ಸಾಂಕ್ರಾಮಿಕ ರೋಗದಿಂದ ರಕ್ಷಿಸುವ ಉದ್ದೇಶದತ್ತ ವೇಗವಾಗಿ ಸಾಗುತ್ತಿದ್ದೇವೆ. ಇದಲ್ಲದೆ, ನಾವು ವಿಶ್ವ ಸಮುದಾಯಕ್ಕೂ ಸಹಾಯ ಮಾಡುತ್ತಿದ್ದೇವೆ. ಭಾರತದ 'ಲಸಿಕೆ ಮೈತ್ರಿ' (ಲಸಿಕೆ ಸ್ನೇಹ) ಉಪಕ್ರಮವು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರರು ಭಾಗಿಯಾಗಿದ್ದರು.

ABOUT THE AUTHOR

...view details