ಕೋಲ್ಕತಾ: ಪಶ್ಚಿಮ ಬಂಗಾಳದ ಡಿಜಿಪಿಯಾಗಿ ಬಿರೇಂದ್ರ ಅವರನ್ನು ನೇಮಿಸಿರುವುದು ಕಾನೂನುಬಾಹಿರ ಎಂದು ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಹೇಳಿದ್ದಾರೆ.
ಬೀರೇಂದ್ರ ಮುಖ್ಯಮಂತ್ರಿಯ ಭದ್ರತಾ ಸಲಹೆಗಾರರಾಗಿದ್ದರು. ನಂತರ ಮಮತಾ ಬ್ಯಾನರ್ಜಿ ಅವರನ್ನು ರಾಜ್ಯ ಪೊಲೀಸ್ ಡಿಜಿ ಆಗಿ ನೇಮಿಸಿದರು. ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ಬಿರೇಂದ್ರ ಅವರನ್ನು ತಮ್ಮ ಸ್ಥಾನದಿಂದ ತೆಗೆದುಹಾಕಿತು.