ನವದೆಹಲಿ:ಸರ್ಕಾರಿ ಖಜಾನೆಯ ಹಣದಲ್ಲಿ ರಾಜಕೀಯ ಜಾಹೀರಾತುಗಳನ್ನು ಸರ್ಕಾರಿ ಜಾಹೀರಾತು ಎಂದು ಬಿಂಬಿಸಿ ಪ್ರಕಟಿಸಿದ ಆಮ್ ಆದ್ಮಿ ಪಕ್ಷ (ಆಪ್) ಪಕ್ಷಕ್ಕೆ ಲೆಫ್ಟಿನೆಂಟ್ ಗವರ್ನರ್ ನೋಟಿಸ್ ನೀಡಿದ್ದಾರೆ. ಇನ್ನು 10 ದಿನಗಳಲ್ಲಿ ಖರ್ಚು ಮಾಡಿದ 163.62 ಕೋಟಿ ರೂಪಾಯಿ ಪಾವತಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರಿಗೆ ಸೂಚಿಸಲಾಗಿದೆ. ಒಂದು ವೇಳೆ ನಿಗದಿತ ವೇಳೆಗೆ ಹಣ ಪಾವತಿಸದಿದ್ದಲ್ಲಿ ಪಕ್ಷದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಸರ್ಕಾರಿ ಬೊಕ್ಕಸದ ಹಣದಲ್ಲಿ ವಿವಿಧ ಜಾಹೀರಾತುಗಳ ಪ್ರಕಟಿಸಿತ್ತು. ಇವುಗಳಲ್ಲಿ ಸಿಎಂ ಸೇರಿದಂತೆ ರಾಜಕೀಯ ನಾಯಕರ ಚಿತ್ರಗಳನ್ನು ಪ್ರಕಟಿಸಲಾಗಿತ್ತು. ಇದು ಸರ್ಕಾರಿ ಜಾಹೀರಾತಿನಲ್ಲಿ ಪಕ್ಷದ ನಾಯಕರ ಚಿತ್ರವಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಇದು ಪಕ್ಷದ ಜಾಹೀರಾತಾಗಿದ್ದು, ಅದಕ್ಕೆ ಸರ್ಕಾರದ ಹಣವನ್ನು ಬಳಕೆ ಮಾಡಿದ್ದು ವಿವಾದವಾಗಿತ್ತು.
64 ಕೋಟಿ ರೂಪಾಯಿ ಬಡ್ಡಿ:ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರು, ಪ್ರಕಟವಾದ ಜಾಹೀರಾತುಗಳಿಗೆ ಖರ್ಚು ಮಾಡಿದ ಹಣಕ್ಕೆ ಬಡ್ಡಿಯಾಗಿ 163 ಕೋಟಿ ರೂಪಾಯಿ ಮರುಪಾವತಿ ಮಾಡಬೇಕು ಎಂದು ಸೂಚಿಸಿ ಕಳೆದ ತಿಂಗಳು ನೋಟಿಸ್ ಜಾರಿ ಮಾಡಿದ್ದರು. 2017 ರ ನಂತರದಲ್ಲಿ ಪ್ರಕಟವಾದ ಎಲ್ಲಾ ಜಾಹೀರಾತುಗಳ ಲೆಕ್ಕಪತ್ರಕ್ಕಾಗಿ ತಂಡವನ್ನು ನಿಯೋಜಿಸಲಾಗಿತ್ತು. ಅದರಂತೆ ಆಪ್ ಸರ್ಕಾರ 99.31 ಕೋಟಿ ರೂಪಾಯಿ ಹಣವನ್ನು ಈಗಾಗಲೇ ಜಾಹೀರಾತಿಗೆ ಹಣ ಬಳಕೆ ಮಾಡಿದೆ. ಅಂದಿನಿಂದ ಈವರೆಗೂ ಬಡ್ಡಿಯಾಗಿ 64.31 ಕೋಟಿ ಸೇರಿಸಿ ಒಟ್ಟಾರೆ 163 ಕೋಟಿ ರೂಪಾಯಿ ವಸೂಲಿಗೆ ಗವರ್ನರ್ ತಾಕೀತು ಮಾಡಿದ್ದಾರೆ.