ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಮಮತಾ ಬ್ಯಾನರ್ಜಿ, ನಂದಿಗ್ರಾಮದ ತಮ್ಮ ಶಿಷ್ಯನ ಎದುರೇ ಸೋಲು ಕಂಡಿದ್ದಾರೆ. ಆದರೆ, ಇದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಮಮತಾ ದೂರಿದ್ದಾರೆ.
ನಂದಿಗ್ರಾಮ ಮತ ಎಣಿಕೆಯ 16 ಸುತ್ತು ಮುಕ್ತಾಯಗೊಳ್ಳುತ್ತಿದ್ದಂತೆ ಮಮತಾ ಬ್ಯಾನರ್ಜಿ 1200 ಮತಗಳಿಂದ ಗೆಲುವು ಸಾಧಿಸಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದರೆ, ಇದರ ಬೆನ್ನಲ್ಲೇ ಸುವೇಂದು ಅಧಿಕಾರಿ 1956 ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾಗಿ ಚುನಾವಣೆ ಘೋಷಣೆ ಮಾಡಿತ್ತು. ಇದು ಟಿಎಂಸಿ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ನಂದಿಗ್ರಾಮ ಚುನಾವಣೆ ಫಲಿತಾಂಶ ವಿಚಾರವಾಗಿ ಈಗಾಗಲೇ ಕೋರ್ಟ್ ಮೊರೆ ಹೋಗುವುದಾಗಿ ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಇದು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಂದಿಗ್ರಾಮದಲ್ಲಿ ಮರುಮತ ಎಣಿಕೆ ಮಾಡಿದ್ರೆ ಜೀವಕ್ಕೆ ಅಪಾಯವಿದೆ. ನಾಲ್ಕು ಗಂಟೆ ಕಾಲ ಸರ್ವರ್ ಡೌನ್ ಆಗಿದೆ ಎಂದಿದ್ದಾರೆ. ಇಲ್ಲಿ ನಾನು ಗೆಲುವು ಸಾಧಿಸಿದ್ದಕ್ಕಾಗಿ ರಾಜ್ಯಪಾಲರು ಸಹ ನನ್ನನ್ನು ಅಭಿನಂದಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿದೆ ಎಂದಿದ್ದಾರೆ. ಇದೇ ವಿಚಾರವಾಗಿ ನಾನು ವ್ಯಕ್ತಿಯೊಬ್ಬನಿಂದ ಎಸ್ಎಂಎಸ್ ಸಹ ಸ್ವೀಕರಿಸಿದ್ದೇನೆ ಎಂದರು.