ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಕೇಸ್ ವಾಪಸ್ ರಾಜಕೀಯ: ಅಲ್ಪ ಮತ್ತು ಬಹುಸಂಖ್ಯಾತರ ಬೆಂಬಲಕ್ಕೆ ಪ್ಲಾನ್​​ - ಕೇರಳ ಸರ್ಕಾರದ ಕ್ಯಾಬಿನೆಟ್

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ವಿಚಾರ ಮತ್ತು ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ದಾಖಲಾದ ದೂರುಗಳನ್ನು ಹಿಂಪಡೆಯಲು ಕೇರಳ ಕ್ಯಾಬಿನೆಟ್ ನಿರ್ಧರಿಸಿದೆ.

pinarayi vijayan
ಪಿಣರಾಯಿ ವಿಜಯನ್​

By

Published : Feb 24, 2021, 7:01 PM IST

ತಿರುವನಂತಪುರ, ಕೇರಳ: ಶಬರಿಮಲ ದೇವಸ್ಥಾನ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಗಳಿಗೆ ಸಂಬಂಧಪಟ್ಟಂತೆ ದಾಖಲಾಗಿದ್ದ ದೂರುಗಳನ್ನು ಹಿಂಪಡೆಯಲು ಕೇರಳ ಸರ್ಕಾರದ ಕ್ಯಾಬಿನೆಟ್ ನಿರ್ಧರಿಸಿದೆ.

ತೀವ್ರ ಅಪರಾಧ ಎನ್ನಿಸಿಕೊಳ್ಳುವ ಅಪರಾಧಗಳನ್ನು ಹಿಂಪಡೆಯದಿರಲು ಸರ್ಕಾರದ ಕ್ಯಾಬಿನೆಟ್ ನಿರ್ಧರಿಸಿದೆ ಉನ್ನತ ಮೂಲಗಳು ತಿಳಿಸಿವೆ.

ನಾಯರ್ ಸರ್ವೀಸ್ ಸೊಸೈಟಿ (ಎನ್​ಎಸ್​ಎಸ್​) ಸೇರಿದಂತೆ ಹಲವು ಸಂಘಟನೆಗಳು ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದಂತೆ ದೂರುಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ದೂರುಗಳನ್ನು ಹಿಂಪಡೆಯಲಾಗಿದ್ದು, ಗಂಭೀರ ಪ್ರಕರಣಗಳ ವಿಚಾರಣೆ ಮುಂದುವರೆಯಲಿದೆ.

ಇದನ್ನೂ ಓದಿ;ಐಪಿಎಸ್​ ಅಧಿಕಾರಿ ಎಂದ್ಹೇಳಿಕೊಂಡು ದೋಖಾ : ಬರೋಬ್ಬರಿ ₹11 ಕೋಟಿ ಲಪಟಾಯಿಸಿದ ಕಿರಾತಕಿ

ಪೌರತ್ವ ತಿದ್ದುಪಡಿ ಕಾಯ್ದೆಯ ವೇಳೆಯಲ್ಲಿ ನಡೆದ ಪ್ರತಿಭಟನೆಗಳನ್ನೂ ಕೂಡಾ ಕೇರಳ ಕ್ಯಾಬಿನೆಟ್ ಹಿಂಪಡೆಯಲು ನಿರ್ಧರಿಸಿದೆ.

ಕೆಲವು ದಿನಗಳ ಮೊದಲು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಿಎಎಗೆ ಸಂಬಂಧ ಪ್ರತಿಭಟನೆ ವಿಚಾರವಾಗಿ ದಾಖಲಾಗಿರುವ ಎಲ್ಲಾ ದೂರುಗಳನ್ನು ಹಿಂಪಡೆಯುವುದಾಗಿ ಯುಡಿಎಫ್ ನಾಯಕ ರಮೇಶ್ ಚೆನ್ನಿಥಾಲಾ ಹೇಳಿದ್ದರು.

ಈ ನಿರ್ಧಾರದಿಂದ ಕೇರಳ ಸರ್ಕಾರ ಅಲ್ಲಿನ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ಬೆಂಬಲವನ್ನ ಒಟ್ಟಿಗೆ ಪಡೆಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details