ಕರ್ನಾಟಕ

karnataka

ETV Bharat / bharat

ದೇಶದಲ್ಲಿ ತೈಲ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗಲಿದೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್

ಒಪೆಕ್(OPEC) ಹೆಚ್ಚು ಕಚ್ಚಾ ತೈಲವನ್ನು ಮಾರುಕಟ್ಟೆಗೆ ತರುವ ಬಗ್ಗೆ ಮಾತನಾಡುತ್ತಿದೆ. ಈ ಕುರಿತು ನಾವೂ ಸಹ ಅಗತ್ಯ ಕ್ರಮ ಕೈಗೊಂಡಿದ್ದೇವೆ. ದೇಶದಲ್ಲಿ ತೈಲ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗಲಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಭರವಸೆ ನೀಡಿದ್ದಾರೆ.

ಹರ್ದೀಪ್ ಸಿಂಗ್
ಹರ್ದೀಪ್ ಸಿಂಗ್

By

Published : Oct 6, 2021, 9:02 AM IST

ಉತ್ತರ ಪ್ರದೇಶ: ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ಬೆನ್ನಲ್ಲೇ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಗ್ರಾಹಕರಿಗೆ ಶುಭ ಸುದ್ದಿಯ ಸುಳಿವು ಕೊಟ್ಟಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸಲು ನಿರ್ಧರಿಸಿದ್ದು, ಉತ್ಪನ್ನದ ಬೆಲೆಗಳು ಕಡಿಮೆಯಾಗಲಿವೆ. ಕಚ್ಚಾ ತೈಲ ಉತ್ಪಾದನೆ ಹೆಚ್ಚಾದರೆ ಬೆಲೆಗಳು ಇಳಿಯುತ್ತವೆ ಎಂದು ಹೇಳಿದರು.

ಕೊರೊನಾದಿಂದಾಗಿ ಜಗತ್ತಿನಾದ್ಯಂತ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡ ಕಾರಣಕ್ಕೆ ಮಾರ್ಚ್ 2020ರಲ್ಲಿ ತೈಲ ಬೆಲೆ ಏರಿಕೆಯಾಗಿತ್ತು. ಸದ್ಯ ಕೋವಿಡ್​ ಹಾವಳಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಆರ್ಥಿಕ ಕ್ಷೇತ್ರ ಸುಧಾರಿಸಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 78 ಯುಸ್​ ಡಾಲರ್​ ಆಗಿದೆ ಎಂದರು.

ಕಳೆದ ಕೆಲವು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಸಿಎನ್‌ಜಿ (CNG) ಕೂಡ ತುಂಬಾ ದುಬಾರಿಯಾಗಿದೆ ಎಂದು ತೈಲ ಬೆಲೆ ಏರಿಕೆಗೆ ಕಾರಣವನ್ನು ವಿವರಿಸಿದ ಸಿಂಗ್, 2010ರಲ್ಲಿ ಕಾಂಗ್ರೆಸ್ ಸರ್ಕಾರವು ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು 1 ಲಕ್ಷದ 40 ಸಾವಿರ ಕೋಟಿ ರೂ. ಮೌಲ್ಯದ ತೈಲ ಬಾಂಡ್‌ಗಳಿಗೆ 15 ವರ್ಷಗಳ ಮೆಚ್ಯೂರಿಟಿ ಪ್ಲಾನ್‌ನೊಂದಿಗೆ ಸಹಿ ಹಾಕಿತ್ತು. 2020ರ ನಂತರ ಈ ಯೋಜನೆಯನ್ನು ನಾವು ಮುಂದುವರೆಸಿಕೊಂಡು ಬಂದಿದ್ದು 20,000 ಕೋಟಿ ರೂ ಬಡ್ಡಿ ಹಣ ಪಾವತಿಸಿದ್ದೇವೆ ಎಂದರು.

ABOUT THE AUTHOR

...view details