ನವದೆಹಲಿ:2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರ ಮಾರ್ಚ್ 15ರವರೆಗೆ ವಿಸ್ತರಣೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಇನ್ಕಮ್ ಟ್ಯಾಕ್ಸ್ ಆಫ್ ಇಂಡಿಯಾ ಟ್ವೀಟ್ ಮಾಡಿ ಹೊಸ ಪ್ರಕಟಣೆ ಹೊರಡಿಸಿದೆ.
ಆದಾಯ ತೆರಿಗೆ ಸಲ್ಲಿಕೆ ಮಾಡಲು ಡಿಸೆಂಬರ್ 31ರವರೆಗೆ ಕೊನೆಯ ಗಡುವು ನೀಡಲಾಗಿತ್ತು. ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ತಿಳಿಸಲಾಗಿತ್ತು. ಆದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡ್ತಿದ್ದ ವೇಳೆ ಅನೇಕ ರೀತಿಯ ಸಮಸ್ಯೆ ಎದುರಾಗಿರುವ ಕಾರಣ ಈ ನಿರ್ಧಾರ ಕೈಗೊಂಡಿದೆ.