ಚೆಂಗಲ್ಪಟ್ಟು(ತಮಿಳುನಾಡು): ಇಂದು ಬೆಳಗ್ಗೆ ಚೆನ್ನೈನಿಂದ ಕಡಲೂರಿಗೆ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸರ್ಕಾರಿ ಬಸ್ ತೆರಳುತ್ತಿತ್ತು. ಚೆಂಗಲ್ಪಟ್ಟು ಜಿಲ್ಲೆಯ ಅಚಿರುಪಾಕ್ಕಂ ಪಕ್ಕದ ತೊಲಪ್ಪೆಡು ಬಳಿ ಬೆಳಗ್ಗೆ 9 ಗಂಟೆಯ ಸುಮಾರಿಗೆ ಬಸ್ ಸಂಚರಿಸುತ್ತಿದ್ದಾಗ ಕಬ್ಬಿಣದ ಸಾಮಗ್ರಿಗಳನ್ನು ತುಂಬಿಕೊಂಡು ಎದುರುಗಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬಸ್ಸಿನ ಎಡಭಾಗ ಸಂಪೂರ್ಣ ಜಖಂಗೊಂಡಿದ್ದು, ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರ್ಕಾರಿ ಬಸ್-ಲಾರಿ ಮಧ್ಯೆ ಅಪಘಾತ: 6 ಜನ ಸಾವು, 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ - ತಮಿಳುನಾಡು ರಸ್ತೆ ಅಪಘಾತ ಸುದ್ದಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಮತ್ತು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಆರು ಜನರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
![ಸರ್ಕಾರಿ ಬಸ್-ಲಾರಿ ಮಧ್ಯೆ ಅಪಘಾತ: 6 ಜನ ಸಾವು, 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ people died in TamilNadu accident, chengalpattu accident news, Travelers died in chengalpattu road accident, Government bus and lorry collide in chengalpattu, TamilNadu road accident news, ತಮಿಳುನಾಡು ಅಪಘಾತದಲ್ಲಿ ಜನರು ಸಾವು, ಚೆಂಗಲ್ಪಟ್ಟು ಅಪಘಾತ ಸುದ್ದಿ, ಚೆಂಗಲ್ಪಟ್ಟು ರಸ್ತೆ ಅಪಘಾತದಲ್ಲಿ ಪ್ರಯಾಣಿಕರು ಸಾವು, ಚೆಂಗಲ್ಪಟ್ಟುದಲ್ಲಿ ಸರ್ಕಾರಿ ಬಸ್ ಮತ್ತು ಲಾರಿ ಡಿಕ್ಕಿ, ತಮಿಳುನಾಡು ರಸ್ತೆ ಅಪಘಾತ ಸುದ್ದಿ,](https://etvbharatimages.akamaized.net/etvbharat/prod-images/768-512-15768685-814-15768685-1657263289706.jpg)
ಸರ್ಕಾರಿ ಬಸ್-ಲಾರಿ ಮಧ್ಯೆ ಭೀಕರ ರಸ್ತೆ ಅಪಘಾತ