ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ 5 ಕೋಟಿ ಕಬ್ಬು ಬೆಳೆಯುವ ರೈತರಿಗೆ ಸಿಹಿ ಸುದ್ದಿ ನೀಡಿದೆ. ಪ್ರತಿ ಕ್ವಿಂಟಲ್ ಕಬ್ಬಿನ ಮೇಲೆ ಎಫ್ಆರ್ಪಿ (Fair and Remunerative Price) ಹೆಚ್ಚಿಸಲು ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟ ಸಭೆ ನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಪಿಯೂಷ್ ಗೋಯಲ್, ಕಬ್ಬು ಬೆಳೆಗಾರರ ಹಿತದೃಷ್ಟಿ ಕಾಪಾಡುವ ಉದ್ದೇಶದಿಂದ ಮುಂದಿನ ಬೆಳೆಗೆ ಅನ್ವಯವಾಗುವ ರೀತಿಯಲ್ಲಿ ಪ್ರತಿ ಕ್ವಿಂಟಲ್ ಕಬ್ಬಿನ ಮೇಲೆ 290 ರೂ. ಎಫ್ಆರ್ಪಿ ಏರಿಕೆ ಮಾಡಲಾಗಿದೆ ಎಂದರು. ಇದರಿಂದ ದೇಶದ 5 ಕೋಟಿ ಕಬ್ಬು ಬೆಳೆಗಾರರು ಇದರ ಲಾಭ ಪಡೆದುಕೊಳ್ಳಲಿದ್ದಾರೆ.
ಇದನ್ನೂ ಓದಿರಿ: ಮಿಗ್-21 ಬೈಸನ್ ಫೈಟರ್ ಏರ್ಕ್ರಾಫ್ಟ್ ಪತನ..ಧಗಧಗನೇ ಹೊತ್ತಿ ಉರಿದ ಯುದ್ಧ ವಿಮಾನ