ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಮಾಡಿದ ಪ್ರತಿಪಕ್ಷಗಳ ನಾಯಕರ ಒತ್ತಾಯವನ್ನು ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಅವರು ತಿರಸ್ಕರಿಸಿದ್ದಾರೆ. ಹಾಗೆ ಚುನಾವಣೆಗೆ ಅಭ್ಯರ್ಥಿಯು ರಾಷ್ಟ್ರೀಯ ಒಮ್ಮತವನ್ನು ಹುಟ್ಟುಹಾಕುವ ಮತ್ತು ಪ್ರತಿಪಕ್ಷಗಳ ಒಗ್ಗಟ್ಟನ್ನು ಖಚಿತಪಡಿಸಿಕೊಳ್ಳುವವರಾಗಿರಬೇಕು ಎಂದು ಹೇಳಿದ್ದಾರೆ.
ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಪಕ್ಷಗಳ ಅಭ್ಯರ್ಥಿಯಾಗಲು ಹಲವಾರು ದೊಡ್ಡ ದೊಡ್ಡ ನಾಯಕರು ನನ್ನ ಬಗ್ಗೆ ಗೌರವಯುತ ಚಿಂತನೆ ಮಾಡಿದ್ದಾರೆ. ನಾನು ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಆದರೆ, ವಿಷಯವನ್ನು ಆಳವಾಗಿ ಪರಿಗಣಿಸಿದ ನಂತರ ವಿರೋಧ ಪಕ್ಷದ ಅಭ್ಯರ್ಥಿಯು ರಾಷ್ಟ್ರೀಯ ಒಮ್ಮತವನ್ನು ಮತ್ತು ರಾಷ್ಟ್ರೀಯ ವಾತಾವರಣವನ್ನು ಸೃಷ್ಟಿಸುವವರಲ್ಲಿ ಒಬ್ಬರಾಗಿರಬೇಕು ಎಂದು ನಾನು ನಂಬುತ್ತೇನೆ. ಪ್ರತಿಪಕ್ಷಗಳ ಒಗ್ಗಟ್ಟಿನ ಜೊತೆಗೆ ಇದನ್ನು ಉತ್ತಮವಾಗಿ ಮಾಡುವ ಇತರರು ಇರುತ್ತಾರೆ ಎಂದು ಸಹ ನಾನು ಭಾವಿಸುತ್ತೇನೆ ಎಂದು ನಯವಾಗಿಯೇ ಈ ಆಫರ್ನ್ನು ನಿಕಾಕರಿಸಿದ್ದಾರೆ.