ಕರ್ನಾಟಕ

karnataka

ETV Bharat / bharat

ನೂರಾರು ಜನರ ಮುಂದೆಯೇ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ವಿಡಿಯೋ - ಫತೇಹಾಬಾದ್​ನಲ್ಲಿ ಯುವಕನ ಮೇಲೆ ಹಲ್ಲೆ

ಯುವಕನ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿರುವ ಘಟನೆ ಹರಿಯಾಣದ ಫತೇಹಾಬಾದ್​ನಲ್ಲಿ ನಡೆದಿದೆ.

Fatehabad hooliganism live video
ಹಲ್ಲೆಯ ಸಿಸಿಟಿವಿ ದೃಶ್ಯ

By

Published : Nov 17, 2020, 6:01 PM IST

Updated : Nov 17, 2020, 7:26 PM IST

ಫತೇಹಾಬಾದ್ : ಮಾರುಕಟ್ಟೆಯಲ್ಲಿ ನೂರಾರು ಜನರ ಮುಂದೆಯೇ ಯುವಕನ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಮೂವರು ದೊಣ್ಣೆಯಿಂದ ಯುವಕನಿಗೆ ಹಿಗ್ಗಾಮುಗ್ಗ ಥಳಿಸುತ್ತಿದ್ದರೆ, ಮತ್ತೊಬ್ಬ ಅಲ್ಲೇ ಪಕ್ಕದಲ್ಲಿದ್ದ ಕಲ್ಲೊಂದನ್ನು ಎತ್ತಿ ಹಾಕಿದ್ದಾನೆ. ಹಾಡಗಹಗಲೇ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿದ್ದರೆ, ಸ್ಥಳದಲ್ಲಿದ್ದ ನೂರಾರು ಜನರು ಮೂಕ ಪ್ರೇಕ್ಷಕರಾಗಿದ್ದರು. ಹಲ್ಲೆಯ ದೃಶ್ಯ ಪಕ್ಕದ ಅಂಗಡಿಯೊಂದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಲ್ಲೆಯ ಸಿಸಿಟಿವಿ ದೃಶ್ಯ

ಕೆಲ ಹೊತ್ತು ಯುವಕನಿಗೆ ಥಳಿಸಿದ ತಂಡ ಬಳಿಕ ಸ್ಥಳದಿಂದ ಪರಾರಿಯಾಗಿದೆ. ದುಷ್ಕರ್ಮಿಗಳು ತೆರಳಿದ ಮೇಲೆ ಧಾವಿಸಿ ಬಂದ ಸ್ಥಳೀಯರು ಯುವಕನನ್ನು ಫತೇಹಾಬಾದ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Last Updated : Nov 17, 2020, 7:26 PM IST

ABOUT THE AUTHOR

...view details