ನವ ದೆಹಲಿ: ಭಾರತ ಸೇರಿದಂತೆ ಜಾಗತಿಕವಾಗಿ ಮಿಲಿಯನ್ಗಟ್ಟಲೆ ಬಳಕೆದಾರರು ಶನಿವಾರ ಸರ್ಚ್ ಎಂಜಿನ್ ಗೂಗಲ್ನ ಜಿಮೇಲ್ ಸೇವೆಯಲ್ಲಿ ಸಮಸ್ಯೆ ಅನುಭವಿಸಿದ್ದು, ಕೆಲ ಗಂಟೆಗಳ ಬಳಿಕ ಮತ್ತೆ ಸೇವೆಯನ್ನು ಪುನಃಸ್ಥಾಪಿಸಲಾಗಿದೆ. ಇಮೇಲ್ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಪ್ರಪಂಚದಾದ್ಯಂತ ಮೊಬೈಲ್ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳೆರಡರ ಮೇಲೂ ಪರಿಣಾಮ ಬೀರುತ್ತಿದೆ ಎಂದು ಬಳಕೆದಾರರು ದೂರು ಸಲ್ಲಿಸಿದ್ದರು. ಅಷ್ಟೇ ಅಲ್ಲದೇ, ಟ್ವಿಟರ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡು ಗೂಗಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:Facebook, WhatsApp ಬೆನ್ನಲ್ಲೇ Gmail ಸರದಿ... ಭಾರತ ಸೇರಿ ಅನೇಕ ದೇಶಗಳಲ್ಲಿ ಸೇವೆ ಸ್ಥಗಿತ