ಕರ್ನಾಟಕ

karnataka

By

Published : Jan 16, 2022, 11:40 AM IST

ETV Bharat / bharat

ಐಐಟಿ-ಐಎಸ್​ಎಂ ಧನಬಾದ್ ವಿದ್ಯಾರ್ಥಿಗೆ ಗೂಗಲ್​ನಿಂದ ₹56 ಲಕ್ಷ ಪ್ಯಾಕೇಜ್‌ನ ಆಫರ್!

ಈ ಕ್ಯಾಂಪಸ್ ಪ್ಲೇಸ್​ಮೆಂಟ್​ನಲ್ಲಿ ವಿದ್ಯಾರ್ಥಿಗಳು ಕನಿಷ್ಠ 10 ಲಕ್ಷ ರೂಪಾಯಿ ಪ್ಯಾಕೇಜ್​ನಿಂದ ಮತ್ತು ಗರಿಷ್ಠ 50 ಲಕ್ಷ ರೂಪಾಯಿವರೆಗಿನ ಪ್ಯಾಕೇಜ್ ಪಡೆದಿದ್ದಾರೆ. ಹೆಚ್ಚಾಗಿ ಬಿಟೆಕ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ಯಾಕೇಜ್ ನೀಡಲಾಗಿದೆ. ಮತ್ತೊಂದೆಡೆ, ಬಿಟೆಕ್ ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಆಫರ್‌ಗಳು ಕೂಡ ಬಂದಿವೆ..

ಐಐಟಿ-ಐಎಸ್​ಎಂ ಧನಬಾದ್ ವಿದ್ಯಾರ್ಥಿಗೆ ಗೂಗಲ್​ನಿಂದ 56 ಲಕ್ಷ ರೂಪಾಯಿಯ ಪ್ಯಾಕೇಜ್ ಆಫರ್

ಧನಬಾದ್, ಜಾರ್ಖಂಡ್ :ದೇಶದ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಧನಬಾದ್ ಐಐಟಿ-ಐಎಸ್​ಎಂನ ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ಆಯ್ಕೆಯಾಗುತ್ತಿದ್ದಾರೆ. ಕ್ಯಾಂಪಸ್ ಪ್ಲೇಸ್​ಮೆಂಟ್ ನಡೆಸಲೂ ಕಂಪನಿಗಳು ಈ ಸಂಸ್ಥೆಗೆ ಎಡತಾಕುತ್ತಿವೆ.

ಇದೀಗ ಗೂಗಲ್ ಸಂಸ್ಥೆ ಐಐಟಿ-ಐಎಸ್‌ಎಂ ಧನ್‌ಬಾದ್‌ನ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಡಿಗ್ರಿ ವಿದ್ಯಾರ್ಥಿ ಅಭಿನವ್‌ಗೆ ₹56 ಲಕ್ಷಗಳ ಪ್ಯಾಕೇಜ್​ನ ಆಫರ್ ನೀಡಿದೆ.

ಇದು ಧನಬಾದ್ ಐಐಟಿ-ಐಎಸ್​ಎಂನ ವಿದ್ಯಾರ್ಥಿಗಳಿಗೆ ಸಿಕ್ಕಿದ 2ನೇ ಅತಿ ದೊಡ್ಡ ಪ್ಯಾಕೇಜ್ ಆಗಿದೆ. ಈ ಮೊದಲು ಓರ್ವ ವಿದ್ಯಾರ್ಥಿಗೆ ಒಂದು ಕೋಟಿ ರೂಪಾಯಿ ಪ್ಯಾಕೇಜ್ ಆಫರ್ ನೀಡಲಾಗಿತ್ತು.

7 ವಿದ್ಯಾರ್ಥಿಗಳಿಗೆ 54 ಲಕ್ಷ ರೂ. ಪ್ಯಾಕೇಜ್ :ಈ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ ಮತ್ತು ಆವಿಷ್ಕಾರ ಉತ್ತೇಜಿಸುವ ನೀತಿಗಳು ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸುತ್ತಿವೆ. 2021-22ರ ಕ್ಯಾಂಪಸ್ ಪ್ಲೇಸ್‌ಮೆಂಟ್​​ಗಾಗಿ 225ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಿಕೊಂಡಿದ್ದವು.

ಈ ಕ್ಯಾಂಪಸ್ ಪ್ಲೇಸ್​ಮೆಂಟ್​ನಲ್ಲಿ ವಿದ್ಯಾರ್ಥಿಗಳು ಕನಿಷ್ಠ 10 ಲಕ್ಷ ರೂಪಾಯಿ ಪ್ಯಾಕೇಜ್​ನಿಂದ ಮತ್ತು ಗರಿಷ್ಠ 50 ಲಕ್ಷ ರೂಪಾಯಿವರೆಗಿನ ಪ್ಯಾಕೇಜ್ ಪಡೆದಿದ್ದಾರೆ. ಹೆಚ್ಚಾಗಿ ಬಿಟೆಕ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ಯಾಕೇಜ್ ನೀಡಲಾಗಿದೆ. ಮತ್ತೊಂದೆಡೆ, ಬಿಟೆಕ್ ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಆಫರ್‌ಗಳು ಕೂಡ ಬಂದಿವೆ.

ಈವರೆಗೆ ಸಂಸ್ಥೆಯ 929 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಂದ ಆಫರ್ ಪಡೆದಿದ್ದಾರೆ. ಈ ಪೈಕಿ ಸುಮಾರು 800 ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿದ್ದಾರೆ. 16 ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಫರ್ ಪಡೆದಿದ್ದಾರೆ.

128 ವಿದ್ಯಾರ್ಥಿಗಳು 30 ಲಕ್ಷದ ಪ್ಯಾಕೇಜ್ ಪಡೆದಿದ್ದರೆ, 489 ವಿದ್ಯಾರ್ಥಿಗಳು 10 ರಿಂದ 30 ಲಕ್ಷದ ಪ್ಯಾಕೇಜ್‌ ಪಡೆದಿದ್ದಾರೆ. 199 ವಿದ್ಯಾರ್ಥಿಗಳು ₹10 ಲಕ್ಷದ ಪ್ಯಾಕೇಜ್ ಪಡೆದಿದ್ದಾರೆ.

ಇದನ್ನೂ ಓದಿ:ವೈರಲ್ ವಿಡಿಯೋ: ಜಲ್ಲಿಕಟ್ಟು ವೇಳೆ ಹಗ್ಗದಲ್ಲಿ ಸಿಲುಕಿದ ಯುವಕ, ಮುಂದೇನಾಯ್ತು ನೋಡಿ!

ABOUT THE AUTHOR

...view details