ಕರ್ನಾಟಕ

karnataka

ETV Bharat / bharat

300 ತಪ್ಪುಗಳನ್ನು ಗುರುತಿಸಿದ್ದಕ್ಕೆ ಇವರಿಗೆ ಸಿಕ್ಕಿದ್ದು ಬರೋಬ್ಬರಿ 66 ಕೋಟಿ!.. ಈ ಬಹುಮಾನ ಕೊಟ್ಟಿದ್ದು ಯಾರು.. ಏಕೆ? - ಇಂದೋರ್​ನಲ್ಲಿ ಗೂಗಲ್​ನ 300 ತಪ್ಪುಗಳನ್ನು ಗುರುತಿಸಿದ ಬಾಲಕ

ಬಗ್ಸ್ಮಿರರ್ ಎಂಬ ಕಂಪನಿಯ ನಿರ್ವಾಹಕ ಅಮನ್ ಪಾಂಡೆ ಅವರು ಸರ್ಚ್ ಎಂಜಿನ್​​​ ಗೂಗಲ್‌ನ ಸುಮಾರು 300 ತಪ್ಪುಗಳನ್ನು ಕಂಡು ಹಿಡಿದಿದ್ದಾರೆ. ಹೀಗಾಗಿ, ಗೂಗಲ್ ಇದುವರೆಗೆ ಅವರಿಗೆ ಸುಮಾರು 66 ಕೋಟಿ ರೂ. ನೀಡಿ ಗೌರವಿಸಿದೆ.

-aman
ಅಮನ್ ಪಾಂಡೆ

By

Published : Feb 18, 2022, 3:48 PM IST

ಇಂದೋರ್( ಮಧ್ಯಪ್ರದೇಶ): ನೀವು ಒಂದು ವರ್ಷದಲ್ಲಿ ಮಿಲಿಯನೇರ್ ಆಗಲು ಬಯಸಿದರೆ ಟೆನ್ಷನ್ ಮಾಡಬೇಡಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಗೂಗಲ್ ನಿಮಗೆ ಸುಲಭವಾದ ದಾರಿಯನ್ನು ತೋರಿಸುತ್ತಿದೆ. ಅದೇ ರೀತಿ ಗೂಗಲ್ ಕೂಡ ನಿಮ್ಮನ್ನು ಲಕ್ಷಾಧಿಪತಿಯಾಗುವ ಕನಸನ್ನು ನನಸಾಗಿಸುತ್ತದೆ.

ಬಗ್ಸ್ಮಿರರ್ ಎಂಬ ಕಂಪನಿಯ ನಿರ್ವಾಹಕ ಅಮನ್ ಪಾಂಡೆ ಅವರು ಸರ್ಚ್ ಎಂಜಿನ್ ಗೂಗಲ್‌ನ ಸುಮಾರು 300 ತಪ್ಪುಗಳನ್ನು ಕಂಡು ಹಿಡಿದಿದ್ದಾರೆ. ಹೀಗಾಗಿ, ಗೂಗಲ್ ಇದುವರೆಗೆ ಅವರಿಗೆ ಸುಮಾರು 66 ಕೋಟಿ ರೂ. ಗಳನ್ನು ನೀಡಿ ಗೌರವಿಸಿದೆ.

ಗೂಗಲ್​ನ ತಪ್ಪುಗಳನ್ನು ಗುರುತಿಸಿ ಹಣ ಗಳಿಸಿದವರು

ಮೂಲತಃ ಉತ್ತರಾಖಂಡ್​ನವರಾದ ಅವರು NITಯಿಂದ B.Tech ಶಿಕ್ಷಣವನ್ನು ಪಡೆದಿದ್ದಾರೆ. ಅವರು ಇತ್ತೀಚಿಗೆ ಸರ್ಚ್ ಎಂಜಿನ್ ಗೂಗಲ್‌ನ ಸುಮಾರು 300 ತಪ್ಪುಗಳನ್ನು ಕಂಡು ಹಿಡಿದು ಪ್ರಸಿದ್ದಿಯನ್ನು ಪಡೆದಿದ್ದಾರೆ.

ಇಂದೋರ್‌ನಲ್ಲಿ ಇತ್ತೀಚೆಗಷ್ಟೇ ಅಮನ್ ಪಾಂಡೆ ಅವರು ಕಚೇರಿಯನ್ನು ತೆರೆದಿದ್ದಾರೆ. 2021ರ ಆರಂಭದಿಂದ ಅವರು ಈ ಯೋಜನೆಯನ್ನು ಗುರಿಯಾಗಿ ಅಳವಡಿಸಿಕೊಳ್ಳುವ ಮೂಲಕ ಗೂಗಲ್​ನ ತಪ್ಪುಗಳನ್ನು ಕಂಡು ಹಿಡಿದಿದ್ದಾರೆ. ಬಗ್ಸ್ಮಿರರ್ ಎಂಬ ತಮ್ಮ ಕಂಪನಿಯ ಮೂಲಕ ಅಮನ್ ಇದುವರೆಗೆ 15 ಮಂದಿಗೆ ಉದ್ಯೋಗವನ್ನೂ ನೀಡಿದ್ದಾರೆ. ಶೀಘ್ರದಲ್ಲೇ ಅವರೂ ತಮ್ಮ ನೌಕರರನ್ನು ಕಾಯಂ ಮಾಡಲಿದ್ದಾರೆ.

ಅಮನ್ ಪಾಂಡೆ ಪ್ರಕಾರ, ಅವರು ಗೂಗಲ್‌ನಿಂದ ಪಡೆದ ಮೊತ್ತವನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡು ಉತ್ತಮ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ. ತಪ್ಪುಗಳನ್ನು ಒಪ್ಪಿಕೊಳ್ಳುವ ಅವಕಾಶವನ್ನು ಗೂಗಲ್‌ ಅವರಿಗೆ ನೀಡಿರುವುದು ತನ್ನ ಅದೃಷ್ಟ ಎಂದು ಅವರು ಪರಿಗಣಿಸುತ್ತಾರೆ.

ಓದಿ:ರಾಜೀನಾಮೆ ಕೊಡುವುದಕ್ಕೆ ಈಶ್ವರಪ್ಪ ಮಾಡಿದ ಅಪರಾಧವೇನು?: ಸಿ.ಟಿ ರವಿ


ABOUT THE AUTHOR

...view details