ನವದೆಹಲಿ:ಭಾರತದ 100ಕ್ಕೂ ಹೆಚ್ಚು ಭಾಷೆಗಳಿಗೆ ಧ್ವನಿ ಮತ್ತು ಪಠ್ಯದ ಹುಡುಕಾಟಕ್ಕೆ ಗೂಗಲ್ ಮುಂದಾಗಿದೆ. ಇದಕ್ಕಾಗಿ ದೇಶದಲ್ಲಿನ ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು 75 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಲಿದೆ ಎಂದು ಅದರ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ. ಭಾರತಕ್ಕೆ ಭೇಟಿ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ದೊಡ್ಡು ರಫ್ತು ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿದೆ ಎಂದರು
ಭಾರತವು ದೊಡ್ಡ ರಫ್ತು ಆರ್ಥಿಕತೆ ದೇಶವಾಗಿದ್ದು, ನಾಗರಿಕರನ್ನು ರಕ್ಷಿಸುವ ಮತ್ತು ಕಂಪನಿಗಳು ಅದರ ಚೌಕಟ್ಟಿನೊಂದಿಗೆ ಹೊಸತನ ಸೃಷ್ಟಿಸಲು ಅನುವು ನೀಡುವ ಸಮತೋಲನವನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಪ್ರಧಾನಿ ಭೇಟಿಯಾಗುವ ಮುನ್ನ ಅವರು, ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಗೂಗಲ್ ಫಾರ್ ಇಂಡಿಯಾ 2022 ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಿ ಕಾರ್ಯಕ್ಕೆ ಶ್ಲಾಘನೆ:"ಪ್ರಧಾನಿ ಜೊತೆಗಿನ ಭೇಟಿಗೆ ಧನ್ಯವಾದಗಳು. ನಿಮ್ಮ ನಾಯಕತ್ವದ ಅಡಿ ತಂತ್ರಜ್ಞಾನ ವೇಗಗೊಳ್ಳುತ್ತಿದೆ. ಎಲ್ಲರಿಗೂ ಕೆಲಸ ಮಾಡುವ ಮುಕ್ತ, ಸಂಪರ್ಕಿತ ಇಂಟರ್ನೆಟ್ ಅನ್ನು ಮುನ್ನಡೆಸಲು ನಮ್ಮ ಬಲವಾದ ಪಾಲುದಾರಿಕೆಯನ್ನು ಮುಂದುವರಿಸಲು ಹಾಗೂ ಭಾರತದ G20 ಅಧ್ಯಕ್ಷ ಸ್ಥಾನವನ್ನು ಬೆಂಬಲಿಸಲು ಎದುರು ನೋಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಭೇಟಿ ವೇಳೆ ಯಾವ ವಿಷಯದ ಕುರಿತು ಚರ್ಚಿಸಲಾಗಿದೆ ಎಂದು ಪಿಚೈ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಣ್ಣ ಉದ್ಯಮ ಮತ್ತು ಸ್ಮಾರ್ಟ್ ಅಪ್ಗಳಿಗೆ ಬೆಂಬಲ, ಸೈಬರ್ ಸೈಕ್ಯೂರಿಟಿಗೆ ಹೂಡಿಕೆ, ಶಿಕ್ಷಣ ಮತ್ತು ಕೌಶಲ್ಯದ ತರಬೇತಿ ಒದಗಿಸುವ ವಿಷಯದ ಕುರಿತು ಅವರು ಚರ್ಚೆ ನಡೆಸಲಿದ್ದಾರೆ. ಜೊತೆಗೆ ಕೃಷಿ, ಆರೋಗ್ಯ ಮತ್ತು ಇತರೆ ಪ್ರಮುಖ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಕೂಡ ಆದ್ಯತೆ ವಿಷಯವಾಗಿದೆ" ಎನ್ನಲಾಗಿದೆ.
ಮಹಿಳಾ ಸ್ಟಾರ್ಟ್ ಅಪ್ಗಳಿಗೆ ಬೆಂಬಲ: ಪ್ರಧಾನ ಮಂತ್ರಿ ಅವರು ಡಿಜಿಟಲ್ ಇಂಡಿಯಾ ದೃಷ್ಟಿಕೋನದಿಂದ ಭಾರತದೆಲ್ಲೆಡೆ ಪ್ರಗತಿಯನ್ನು ನಾವು ಕಾಣುತ್ತಿದ್ದೇವೆ. ಈ ಅನುಭವಗಳನ್ನು ಭಾರತ ಆತಿಥ್ಯದ 2023ರ ಜಿ 20 ಶೃಂಗಸಭೆಯಲ್ಲಿ ಪ್ರಪಂಚದ ಜೊತೆ ಹಂಚಿಕೊಳ್ಳಲಿದೆ. ಇನ್ನು ಗೂಗಲ್ ಫಾರ್ ಇಂಡಿಯಾ 2022 ಕುರಿತು ಮಾತನಾಡಿದ ಅವರು, ಇಂಡಿಯಾ ಡಿಜಿಟೈಸೈಶನ್ ಫಂಡ್(ಐಡಿಎಫ್) ಭಾರತದ ಸ್ಮಾರ್ಟ್ಅಪ್ಗಳ ಮೇಲೆ ಗಮನ ಹರಿಸುತ್ತಿದೆ. ನಾಲ್ಕನೇ ಒಂದು ಭಾಗದ ಅಂದರೆ 300 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಮಹಿಳಾ ನೇತೃತ್ವದ ಸ್ಟಾರ್ಟ್ಅಪ್ಗಳ ಮೇಲೆ ಹಾಕಲಾಗುವುದು ಎಂದು ಮಾಹಿತಿ ನೀಡಿದರು.