ಕರ್ನಾಟಕ

karnataka

ETV Bharat / bharat

ಮಲಯಾಳಂ ಕವಿತೆಗಳ ಅಜ್ಜಿ ಖ್ಯಾತಿಯ ಬಾಲಾಮಣಿ ಅಮ್ಮನಿಗೆ Google Doodle ಗೌರವ - ಗೂಗಲ್ ಡೂಡಲ್

ಮಲಯಾಳಂ ಖ್ಯಾತ ಕವಯತ್ರಿ ಬಾಲಾಮಣಿ ಅಮ್ಮ ಅವರಿಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

ಬಲಮನಿ ಅಮ್ಮ
ಬಲಮನಿ ಅಮ್ಮ

By

Published : Jul 19, 2022, 12:28 PM IST

Updated : Jul 19, 2022, 3:55 PM IST

ಹೈದರಾಬಾದ್: ಮಲಯಾಳಂ ಕವಿತೆಗಳ ಅಜ್ಜಿ ಎಂದೇ ಖ್ಯಾತರಾಗಿದ್ದ ಕವಯತ್ರಿ ಬಾಲಾಮಣಿ ಅಮ್ಮ ಅವರ 113ನೇ ಜನ್ಮದಿನ ಇಂದು. ಅಂತೆಯೇ ಸರ್ಚ್ ಎಂಜಿನ್ ದೈತ್ಯ ಸಂಸ್ಥೆ ಗೂಗಲ್, ಅಮ್ಮನಿಗೆ ಡೂಡಲ್ ಮೂಲಕ ಗೌರವ ನಮನ ಸಲ್ಲಿಸಿದೆ.

ಗೂಗಲ್​​ ಸರ್ಚ್ ಎಂಜಿನ್​ನ ಮುಖಪುಟದಲ್ಲಿರುವ ಬಾಲಾಮಣಿ ಅಮ್ಮನ ಡೂಡಲ್​ ಅನ್ನು ಕೇರಳ ಮೂಲದ ಕಲಾವಿದರಾದ ದೇವಿಕಾ ರಾಮಚಂದ್ರನ್ ರಚಿಸಿದ್ದಾರೆ. ಶ್ವೇತ ಸೀರೆಯಲ್ಲಿ ಮನೆಯಲ್ಲಿ ಕುಳಿತು ಬರೆಯುತ್ತಿರುವ ಡೂಡಲ್ ಇದಾಗಿದೆ.

ಕೇರಳದ ತ್ರಿಸ್ಸೂರು ಜಿಲ್ಲೆಯ ಅಮ್ಮ ತಮ್ಮ ಬರಹದ ಮೂಲಕ ಮಲಯಾಳಂ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಇವರ ಸಾಹಿತ್ಯ ಕೃಷಿಗೆಕೇಂದ್ರ ಸರ್ಕಾರದ ಸರಸ್ವತಿ ಸಮ್ಮಾನ್​, ಪದ್ಮ ವಿಭೂಷಣ ಸೇರಿದಂತೆ ಪ್ರತಿಷ್ಠಿತ ರಾಷ್ಟ್ರೀಯ ಪುರಸ್ಕಾರಗಳು ಒಲಿದಿವೆ.

ಅಮ್ಮ ಶಾಲೆಗೆ ಹೋಗದಿದ್ದರೂ ಕೂಡ ತಮ್ಮ ಚಿಕ್ಕಪ್ಪನಿಂದ ಮನೆಯಲ್ಲೇ ಅಕ್ಷರಭ್ಯಾಸ ಮಾಡಿ, ಸಾಹಿತ್ಯ ವಲಯದಲ್ಲಿ ಸಾಧನೆ ಮಾಡಿದವರು. 20ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಬಿಡುಗಡೆ ಮಾಡಿರುವ ಇವರು, 2004ರಲ್ಲಿ ಇಹಲೋಕ ತ್ಯಜಿಸಿದರು. ತಮ್ಮ ಕವಿತೆಗಳಲ್ಲಿ ಮಕ್ಕಳು ಮತ್ತು ಮೊಮ್ಮಕ್ಕಳ ಮೇಲಿನ ಪ್ರೀತಿಯ ಬಗ್ಗೆ ಬರೆದಿರುವುದರಿಂದ ಇವರಿಗೆ ಬಾಲಾಮಣಿ ಅಮ್ಮ ಮತ್ತು ಮಲಯಾಳಂ ಕವಿತೆಗಳ ಅಜ್ಜಿ ಎಂದು ಕರೆಯಲಾಗುತ್ತೆ.

Last Updated : Jul 19, 2022, 3:55 PM IST

ABOUT THE AUTHOR

...view details