ನವದೆಹಲಿ: ಭಾರತದ ಸ್ಯಾಟಲೈಟ್ ಮ್ಯಾನ್ ಎಂದೇ ಖ್ಯಾತರಾಗಿರುವ, ಹಿರಿಯ ಖಗೋಳ ವಿಜ್ಞಾನಿ ದಿ. ಉಡುಪಿ ರಾಮಚಂದ್ರ ರಾವ್ ಅವರ ಜನ್ಮದಿನದಂದು ಗೂಗಲ್, ರಾವ್ ಅವರ ಚಿತ್ರವಿರುವ ವಿಶಿಷ್ಟ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ವಿಜ್ಞಾನಿ ಯು.ಆರ್. ರಾವ್ ಜನ್ಮದಿನದಂದು ಗೂಗಲ್ ಡೂಡಲ್ ಗೌರವ - ಕಾಸ್ಮಿಕ್ ರೇ ವಿಜ್ಞಾನಿ ರಾವ್
ಕಾಸ್ಮಿಕ್ ರೇ ವಿಜ್ಞಾನಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ರಾವ್, ಅಮೆರಿಕದ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT) ಭಾರತದ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ಡಾ. ವಿಕ್ರಮ ಸಾರಾಭಾಯಿ ಅವರ ಕೈಕೆಳಗೆ ಕೆಲಸ ಮಾಡಿದ್ದರು. ನಾಸಾ ದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಗ್ರುಪ್ ನೊಂದಿಗೆ ಕೆಲಸ ಮಾಡಿದ ರಾವ್, ಮರೈನರ್-2 ವೀಕ್ಷಣೆಗಳ ಮೂಲಕ ನಿರಂತರ ಸೋಲಾರ್ ವಿಂಡ್ ಹಾಗೂ ಅದರಿಂದ ಜಿಯೊ ಮ್ಯಾಗ್ನೆಟಿಸಂ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಖಚಿತವಾದ ಸಂಶೋಧನೆಗಳನ್ನು ಕೈಗೊಂಡಿದ್ದರು.
![ವಿಜ್ಞಾನಿ ಯು.ಆರ್. ರಾವ್ ಜನ್ಮದಿನದಂದು ಗೂಗಲ್ ಡೂಡಲ್ ಗೌರವ Google Doodle honours India's Satellite Man, Udupi Ramachandra Rao on his Birth Anniversary](https://etvbharatimages.akamaized.net/etvbharat/prod-images/768-512-10945993-905-10945993-1615358762975.jpg)
ವಿಜ್ಞಾನಿ ಯು.ಆರ್. ರಾವ್ ಜನ್ಮದಿನದದಂದು ಗೂಗಲ್ ಡೂಡಲ್ ಗೌರವ
ಇಂದು ಮಾ.10 ರಂದು ಯು.ಆರ್. ರಾವ್ ಹುಟ್ಟಿದ ದಿನ. ಈ ಸುಸಂದರ್ಭವನ್ನು ಗೂಗಲ್ ಮತ್ತೂ ವಿಶೇಷವಾಗಿಸಿದೆ. ಯು.ಆರ್. ರಾವ್ ಅವರು ಬಾಹ್ಯಾಕಾಶದಲ್ಲಿರುವಂತೆ ಹಾಗೂ ಹಿಂಭಾಗದಲ್ಲಿ ಭೂಮಿ ಮತ್ತು ನಕ್ಷತ್ರಗಳು ಚಲಿಸುತ್ತಿರುವಂತೆ ಸುಂದರವಾದ ಡೂಡಲ್ ಅನ್ನು ಗೂಗಲ್ ವಿನ್ಯಾಸಗೊಳಿಸಿದೆ.
"ರಾವ್ ಅವರ ಆಕಾಶದೆತ್ತರದ ಸಾಧನೆಗಳು ಬ್ರಹ್ಮಾಂಡದ ಎಲ್ಲ ದಿಕ್ಕುಗಳಲ್ಲೂ ಪ್ರತಿಧ್ವನಿಸಲಿವೆ." ಎಂದು ಡೂಡಲ್ಗೆ ಕ್ಯಾಪ್ಷನ್ ನೀಡಿದ್ದು, ಇದನ್ನು ಗೂಗಲ್ @GoogleDoodles ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಸಹ ಮಾಡಲಾಗಿದೆ.
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷರಾಗಿದ್ದ ಯು.ಆರ್. ರಾವ್, 1975ರಲ್ಲಿ ಭಾರತದ ಪ್ರಥಮ ಉಪಗ್ರಹ ಆರ್ಯಭಟ ಹಾರಿಬಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
- ಮಾರ್ಚ್ 10, 1932 ರಲ್ಲಿ ಕರ್ನಾಟಕದಲ್ಲಿ ಜನಿಸಿದ್ದ ರಾವ್, 2017ರಲ್ಲಿ ನಿಧನರಾದರು.
- ಇವರ ಸಾಧನೆಗಳಿಗೆ 1976 ರಲ್ಲಿ ಪದ್ಮಭೂಷಣ ಹಾಗೂ 2017 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
- ಕಾಸ್ಮಿಕ್ ರೇ ವಿಜ್ಞಾನಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ರಾವ್, ಅಮೆರಿಕದ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಲಿಯಲ್ಲಿ (MIT) ಭಾರತದ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ಡಾ. ವಿಕ್ರಮ ಸಾರಾಭಾಯಿ ಅವರ ಕೈಕೆಳಗೆ ಕೆಲಸ ಮಾಡಿದ್ದರು.
- ನಾಸಾ ದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಗ್ರುಪ್ ನೊಂದಿಗೆ ಕೆಲಸ ಮಾಡಿದ ರಾವ್, ಮರೈನರ್-2 ವೀಕ್ಷಣೆಗಳ ಮೂಲಕ ನಿರಂತರ ಸೋಲಾರ್ ವಿಂಡ್ ಹಾಗೂ ಅದರಿಂದ ಜಿಯೊ ಮ್ಯಾಗ್ನೆಟಿಸಂ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಖಚಿತವಾದ ಸಂಶೋಧನೆಗಳನ್ನು ಕೈಗೊಂಡಿದ್ದರು.
- ಪಯೊನಿಯರ್ ಹಾಗೂ ಎಕ್ಸಪ್ಲೋರರ್ ಸ್ಪೇಸ್ಕ್ರಾಫ್ಟ್ಗಳ ಮೇಲೆ ಇವರು ಕೈಗೊಂಡ ಅಧ್ಯಯನಗಳಿಂದ, ಸೋಲಾರ್ ಕಾಸ್ಮಿಕ್ ರೇ ಹಾಗೂ ಆಕಾಶದಲ್ಲಿ ಅಂತರ್ಗ್ರಹ ಎಲೆಕ್ಟ್ರೊಮ್ಯಾಗ್ನೆಟಿಕ್ ಪರಿಣಾಮಗಳ ಬಗ್ಗೆ ತಿಳಿಯಲು ಸಹಕಾರಿಯಾಯಿತು.
- ಯು.ಆರ್. ರಾವ್, ಅಹ್ಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬ್ ಆಡಳಿತ ಮಂಡಳಿಯ ಚೇರಮನ್ರಾಗಿ, ಬೆಂಗಳೂರಿನ ನೆಹರು ಪ್ಲಾನೆಟೋರಿಯಂ ಚೇರಮನ್ರಾಗಿ ಹಾಗೂ ತಿರುವನಂತಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಚಾನ್ಸಲರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.