ಕರ್ನಾಟಕ

karnataka

ETV Bharat / bharat

Pani Puri: ಗೂಗಲ್ ಮುಖಪುಟದಲ್ಲಿ ಪಾನಿಪುರಿ ಗೇಮ್​! ಏನಿದು?

ಇಂದು ಗೂಗಲ್​ ಡೂಡಲ್​ ಪಾನಿಪುರಿ ಗೇಮ್​ ಅನ್ನು ಹಂಚಿಕೊಂಡಿದೆ.

ಗೂಗಲ್​ ಡೂಡಲ್​
ಗೂಗಲ್​ ಡೂಡಲ್​

By

Published : Jul 12, 2023, 11:02 AM IST

Updated : Jul 12, 2023, 2:06 PM IST

ಹೈದರಾಬಾದ್ :ಟೆಕ್​ ದೈತ್ಯ ಕಂಪನಿಗೂಗಲ್ ವಿಶೇಷ ಸಂದರ್ಭಗಳನ್ನು ತನ್ನ ಬಳಕೆದಾರರಿಗೆ ಆಕರ್ಷಕ ​ಡೂಡಲ್​ ಮೂಲಕ ತಿಳಿಸುತ್ತಲೇ ಇರುತ್ತದೆ. ಸಾಧಕರಿಗೆ ಗೌರವ ಸಲ್ಲಿಸುವುದರಿಂದ ಹಿಡಿದು ತಿಂಡಿತಿನಿಸು, ಹಬ್ಬ-ಹರಿದಿನಗಳೂ ಸೇರಿದಂತೆ ಸ್ಮರಣೀಯ ಸಂದರ್ಭಗಳನ್ನು ಡೂಡಲ್​ ಮೂಲಕ ತನ್ನ ಮುಖಪುಟದಲ್ಲಿ ಪ್ರದರ್ಶಿಸುತ್ತದೆ. ಅದರಂತೆ ಇಂದು ಜನಪ್ರಿಯ ಖಾದ್ಯವಾದ ಪಾನಿಪುರಿ ದಿನವನ್ನು ಕೂಡ​ ವಿಶೇಷವಾಗಿ ಆಚರಿಸುತ್ತಿದೆ.

2015ರ ಜುಲೈ 12ರಂದು ಮಧ್ಯಪ್ರದೇಶದ ಇಂದೋರ್‌ನ ರೆಸ್ಟೋರೆಂಟ್‌ವೊಂದು ತನ್ನ ಗ್ರಾಹಕರಿಗಾಗಿ 51 ವಿವಿಧ ರೀತಿಯ ಪಾನಿಪುರಿಗಳನ್ನು ತಯಾರಿಸಿತು. ಅಲ್ಲಿ ತಯಾರಿಸಲಾಗಿದ್ದ ಅಷ್ಟೂ ಪಾನಿಪುರಿಗಳು ಅತ್ಯಂತ ರುಚಿಕರವಾಗಿದ್ದರಿಂದ ಗೋಲ್ಡನ್​ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ನಲ್ಲಿ ಸ್ಥಾನ ನೀಡಲಾಗಿತ್ತು. ಅಂದಿನಿಂದ ಜುಲೈ 12 ಅನ್ನು 'ಪಾನಿಪುರಿ ದಿನ' ಎಂದು ಕರೆಯಲಾಗುತ್ತಿದೆ. ಇದೀಗ ಎಂಟು ವರ್ಷಗಳ ನಂತರ ಗೂಗಲ್ ಪಾನಿಪುರಿ ದಿನಾಚರಿಸುತ್ತಿದ್ದು, ಪಾನಿಪುರಿ ಗೇಮ್ ರಚಿಸಿದೆ.

ಡೂಡಲ್​ ಪಾನಿಪುರಿ ಗೇಮ್​

ಆಲೂಗಡ್ಡೆ, ಕ್ಯಾರೆಟ್​ ಹಾಗೂ ಮಸಾಲೆ ನೀರಿನಿಂದ ತುಂಬಿದ ಗರಿಗಿರಿಯಾದ ಪುರಿ ದಕ್ಷಿಣ ಏಷ್ಯಾದ ಬೀದಿಬದಿಯ ಜನಪ್ರಿಯ ಖಾದ್ಯ. ಗೂಗಲ್​ ಡೂಡಲ್​ ಪಾನಿಪುರಿ ಗೇಮ್​ ಆಡಲು ಈ ಹಂತಗಳನ್ನು ಅನುಸರಿಸಿ..

  1. ಮೊದಲಿಗೆ, www.google.com ಎಂದು ಟೈಪ್​ ಮಾಡಿ ಸೈಟ್​ಗೆ ಭೇಟಿ ನೀಡಿ.
  2. ಸರ್ಚ್​ ಇಂಜಿನ್ ಮೇಲೆ ಪ್ರದರ್ಶಿಸಲಾದ ಡೂಡಲ್ ಮೇಲೆ ಕ್ಲಿಕ್ಕಿಸಿ.
  3. ಗೇಮ್​ ತೆರೆದುಕೊಂಡ ನಂತರ ಟೈಮ್​ ಅಥವಾ ರಿಲ್ಯಾಕ್ಸ್​ಮೋಡ್​ ಆಪ್ಶನ್​ಗಳಿದ್ದು, ನಿಮಗೆ ಬೇಕಾಗಿದ್ದನ್ನು ಆಯ್ಕೆ ಮಾಡಿ.
  4. ಗೇಮ್​ ಪ್ರಾರಂಭವಾದ ನಂತರ ಗ್ರಾಹಕರು ಬಂದು ಕೇಳುವ ಪಾನಿಪುರಿಗಳ ಮೇಲೆ ಕ್ಲಿಕ್​ ಮಾಡುತ್ತ ಗೇಮ್​ ಆನಂದಿಸಿ.

ಮಹಾಭಾರತದ ಅವಧಿಯಲ್ಲಿ ದ್ರೌಪದಿ ಪಾನಿಪುರಿ ರೀತಿಯ ಖಾದ್ಯ ಕಂಡುಹಿಡಿದಳು ಎಂದು ಹೇಳಲಾಗುತ್ತದೆ. ದ್ರೌಪದಿಯ ಅತ್ತೆ ಕುಂತಿಯು ಎಲ್ಲ ಗಂಡಂದಿರ ಹಸಿವು ನೀಗಿಸಲು ಆಲೂಗಡ್ಡೆ ಮತ್ತು ಗೋದಿ ಹಿಟ್ಟು ಬಳಸಿ ಖಾದ್ಯ ತಯಾರಿಸಲು ದ್ರೌಪದಿಗೆ ಹೇಳಿದಳಂತೆ. ಈ ವೇಳೆ ದ್ರೌಪದಿ ಮಾಡಿದ ಖಾದ್ಯವು ಚಿಕ್ಕ ಗಾತ್ರದ ಪಾನಿಪುರಿಯಾಗಿದ್ದು, ಅದು ಪಾಂಡವರ ಹಸಿವು ನೀಗಿಸಲು ಸಹಾಯ ಮಾಡಿತು ಎಂಬ ಮಾಹಿತಿ ಇದೆ. ಜನಪ್ರಿಯ ಪಾನಿಪುರಿ ಖಾದ್ಯವನ್ನು ದೇಶಾದ್ಯಂತ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಗೋಲ್​ಗಪ್ಪ ಎಂದು ಕರೆದರೆ, ಕರ್ನಾಟಕದಲ್ಲಿ ಪಾನಿಪುರಿ, ಪಶ್ಚಿಮ ಬಂಗಾಳ, ಬಿಹಾರದಲ್ಲಿ ಪುಚ್ಕಾ ಎಂದು ಕರೆಯುತ್ತಾರೆ.

ಇದನ್ನೂ ಓದಿ:ಡಾ.ಮಾರಿಯೋ ಮೊಲಿನಾರನ್ನು ಡೂಡಲ್ ಮೂಲಕ ಸ್ಮರಿಸಿದ ಗೂಗಲ್‌: ಯಾರಿವರು ಗೊತ್ತೇ?

Last Updated : Jul 12, 2023, 2:06 PM IST

ABOUT THE AUTHOR

...view details