ಕರ್ನಾಟಕ

karnataka

ETV Bharat / bharat

ಗೂಗಲ್​ನಿಂದ ಕ್ಷಮೆಯಾಚನೆ: ಎಚ್ಚರಿಕೆ ನೀಡಿ ಕಾನೂನು‌ ಕ್ರಮ ಕೈಬಿಟ್ಟ ಸರ್ಕಾರ‌

ಗೂಗಲ್ ವಿರುದ್ಧ ನಾವು ಕಾನೂನು ಕ್ರಮಕ್ಕೆ ಮುಂದಾಗಿದ್ದೆವು. ಆದರೆ, ಗೂಗಲ್​ನವರು ಎಚ್ಚೆತ್ತು ಕ್ಷಮೆ‌ ಕೇಳಿದ್ದಾರೆ. ಅವರ ಕ್ಷಮೆ ಪರಿಗಣಿಸಿದ್ದೇವೆ. ಮತ್ತೊಮ್ಮೆ ಇಂತಹ ತಪ್ಪನ್ನ ಮಾಡದಂತೆ ಎಚ್ಚರಿಕೆ ನೀಡಿ ಕಾನೂನು ಕ್ರಮದಿಂದ ಹಿಂದೆ ಸರಿದಿದ್ದೇವೆ..

google apologize
google apologize

By

Published : Jun 4, 2021, 4:05 PM IST

Updated : Jun 4, 2021, 9:18 PM IST

ಬೆಂಗಳೂರು: ಕನ್ನಡ ಭಾಷೆಗೆ ಅಪಮಾನ ಮಾಡಿದ್ದ ಗೂಗಲ್ ಕ್ಷಮೆಯಾಚಿಸಿದ್ದನ್ನು ಪರಿಗಣಿಸಿ ಮತ್ತೊಮ್ಮೆ ಇಂತಹ ತಪ್ಪನ್ನ ಮಾಡದಂತೆ ಎಚ್ಚರಿಕೆ ನೀಡಿ ಕಾನೂನು ಕ್ರಮದಿಂದ ಹಿಂದೆ ಸರಿದಿರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಗಲ್​ನಿಂದ ಕನ್ನಡಕ್ಕೆ ಅಪಮಾನವಾದ ವಿಚಾರ ಖಂಡನೀಯವಾಗಿದೆ. ಗೂಗಲ್ ವಿರುದ್ಧ ನಾವು ಕಾನೂನು ಕ್ರಮಕ್ಕೆ ಮುಂದಾಗಿದ್ದೆವು.

ಸಚಿವ ಅರವಿಂದ ಲಿಂಬಾವಳಿ

ಆದರೆ, ಗೂಗಲ್​ನವರು ಎಚ್ಚೆತ್ತು ಕ್ಷಮೆ‌ ಕೇಳಿದ್ದಾರೆ. ಅವರ ಕ್ಷಮೆ ಪರಿಗಣಿಸಿದ್ದೇವೆ. ಮತ್ತೊಮ್ಮೆ ಈ ರೀತಿ ಕನ್ನಡ ಭಾಷೆಗೆ ಅಪಮಾನವಾಗುವ ರೀತಿ ನಡೆದುಕೊಳ್ಳಬಾರದು ಎನ್ನುವ ಎಚ್ಚರಿಕೆ ನೀಡಿ ಪ್ರಕರಣವನ್ನು ಕೈಬಿಟ್ಟಿದ್ದೇವೆ ಎಂದರು.

ದೇಶದ ಕೊಳಕು ಭಾಷೆ ಎಂದು ಗೂಗಲ್ ಸರ್ಚ್ ಮಾಡಿದರೆ ಕನ್ನಡ ಎನ್ನುವ ಉತ್ತರವನ್ನು ನಿನ್ನೆ ಗೂಗಲ್ ತೋರಿಸುತ್ತಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡಿಗರು, ಫೀಡ್ ಬ್ಯಾಕ್ ನೀಡಿ ಗೂಗಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೇ ಮಾಡಿದರು.

ಸರ್ಕಾರವೂ ಕಾನೂನು ಕ್ರಮದ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಸಂಜೆ ವೇಳೆಗೆ ಕನ್ನಡದಲ್ಲೇ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ಗೂಗಲ್ ತೆರೆ ಎಳೆಯುವ ಪ್ರಯತ್ನ ನಡೆಸಿತು.

Last Updated : Jun 4, 2021, 9:18 PM IST

ABOUT THE AUTHOR

...view details