ಕಟಕ್(ಒಡಿಶಾ):ಎರಡು ಸರಕು ಸಾಗಣೆ ರೈಲಿನ ವ್ಯಾಗನ್ಗಳು ಹಳಿ ತಪ್ಪಿರುವ ಘಟನೆ ಕಟಕ್ ರೈಲು ನಿಲ್ದಾಣದ ಸಮೀಪದಲ್ಲಿ ನಡೆದಿದೆ. ಒಂದು ಟ್ರ್ಯಾಕ್ನಿಂದ ಮತ್ತೊಂದು ಟ್ರ್ಯಾಕ್ಗೆ ಬದಲಾವಣೆ ಆಗುವ ವೇಳೆ ಉಂಟಾದ ಸಮಸ್ಯೆಯಿಂದ ವ್ಯಾಗನ್ಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಎರಡು ರೈಲಿನ ಮೂರು ವ್ಯಾಗನ್ಗಳು ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ರೈಲ್ವೆ ಟ್ರ್ಯಾಕ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದ್ದು, ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.