ಕರ್ನಾಟಕ

karnataka

ETV Bharat / bharat

ಸುಮಾರು 24 ಕಿ.ಮೀ. ಹಿಂದಕ್ಕೆ ಚಲಿಸಿ ನಂತರ ಹಳಿ ತಪ್ಪಿದ ಗೂಡ್ಸ್​ ರೈಲು - goods train accident

ಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗ ರೈಲು ಚಾಲಕನ ನಿಯಂತ್ರಣ ತಪ್ಪಿ 24 ಕಿ.ಮೀ. ಹಿಮ್ಮುಖವಾಗಿ ಚಲಿಸಿದೆ. ಬಿಮಲಗಢ ರೈಲ್ವೆ ಸ್ಟೇಷನ್​ ಬಳಿ ಚಾಲಕ ಬ್ರೇಕ್ ಹಾಕಿದಾಗ, ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿ ಒಂದರ ಮೇಲೊಂದು ಬಿದ್ದಿವೆ.

Goods Train Runs Reverse For 24 Kms; Four Bogies Derail
ಹಳಿ ತಪ್ಪಿದ ಗೂಡ್ಸ್​ ರೈಲು

By

Published : Dec 23, 2020, 2:13 PM IST

ಒಡಿಶಾ/ರೂರ್ಕೆಲಾ:ಗೂಡ್ಸ್​ ರೈಲೊಂದು ನಿಯಂತ್ರಣ ತಪ್ಪಿ ಸುಮಾರು 24 ಕಿ.ಮೀ ರಿವರ್ಸ್​ ಚಲಿಸಿ ಅಪಘಾತಕ್ಕೀಡಾಗಿದೆ. ಈ ಘಟನೆ ಒಡಿಶಾದ ಸುಂದರ್‌ಗಢ ಜಿಲ್ಲೆಯ ಬಿಮಲ್​​ಗಢ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಹಳಿ ತಪ್ಪಿದ ಗೂಡ್ಸ್​ ರೈಲು

ಘಟನೆಯಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸರಕು ರೈಲಿನ ಒಟ್ಟು ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಕಬ್ಬಿಣದ ಅದಿರುಗಳನ್ನು ಹೊತ್ತು ಸಾಗಿದ​ ರೈಲು ಬಾರಾಸುನಾದಿಂದ ರೂರ್ಕೆಲಾ ಕಡೆಗೆ ಹೋಗುತ್ತಿತ್ತು. ಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದಾಗ ರೈಲು ಚಾಲಕನ ನಿಯಂತ್ರಣ ತಪ್ಪಿ 24 ಕಿ.ಮೀ. ಹಿಮ್ಮುಖವಾಗಿ ಚಲಿಸಿದೆ. ಬಿಮಲಗಢ ರೈಲ್ವೆ ಸ್ಟೇಷನ್​ ಬಳಿ ಚಾಲಕ ಬ್ರೇಕ್ ಹಾಕಿದಾಗ, ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿ ಒಂದರ ಮೇಲೊಂದು ಬಿದ್ದಿವೆ. ಈ ವೇಳೆ ರೈಲ್ವೆ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಅಪಘಾತವು ಯಾವ ಸಂದರ್ಭಗಳಲ್ಲಿ ಸಂಭವಿಸಿದೆ ಮತ್ತು ಯಾರು ಹೊಣೆ ಎಂಬುದನ್ನು ಕಂಡುಹಿಡಿಯಲು ಶೀಘ್ರ ತನಿಖೆ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ:ಜಾರ್ಖಂಡ್‌ನಲ್ಲಿ ಬಾವಿಗೆ ಬಿದ್ದ ಮರಿ ಆನೆ: ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

ABOUT THE AUTHOR

...view details