ಮುಂಬೈ (ಮಹಾರಾಷ್ಟ್ರ): ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ ದಾಖಲಾಗಿದೆ. ಇದೇ ಮೊದಲ ಬಾರಿಗೆ ಯುದ್ಧ ವಿಮಾನದ ಪೈಲಟ್ ಆಗಿ ಮಹಿಳೆಯೊಬ್ಬರು ನೇಮಕವಾಗಿದ್ದಾರೆ. ಕ್ಯಾಪ್ಟನ್ ಅಭಿಲಾಷಾ ಬರಾಕ್ ಇಂತಹ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಳೆದ ವರ್ಷದ ಜೂನ್‌ನಲ್ಲಿ ಮೊದಲ ಬಾರಿಗೆ ಯುದ್ಧ ವಿಮಾನದ ಪೈಲಟ್ ತರಬೇತಿಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ಇವರಿಬ್ಬರೂ ನಾಸಿಕ್‌ನ ಸೇನಾ ಯುದ್ಧ ವಿಮಾನಯಾನ ತರಬೇತಿ ಶಾಲೆಯಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪಡೆದಿದ್ದರು. ಇದರಲ್ಲಿ ಒಬ್ಬರಾದ ಕ್ಯಾಪ್ಟನ್ ಅಭಿಲಾಷಾ ಬರಾಕ್ ಇದೀಗ ಏವಿಯೇಷನ್ ಕಾರ್ಪ್ಸ್ನ ಯುದ್ಧ ವಿಮಾನದ ಪೈಲಟ್ ಆಗಿ ಸೇರಿದ್ದಾರೆ.
ನಾಸಿಕ್ ಸೇನಾ ಯುದ್ಧ ವಿಮಾನಯಾನ ತರಬೇತಿ ಶಾಲೆಯಲ್ಲಿ ಬುಧವಾರ ನಡೆದ ನಿರ್ಗಮನ ಪಥಸಂಚಲನದಲ್ಲಿ ಕ್ಯಾಪ್ಟನ್ ಅಭಿಲಾಷಾ ಬರಾಕ್ ಸೇರಿ 36 ಜನ ಪೈಲಟ್ಗಳಿಗೆ ಏವಿಯೇಷನ್ನ ಮಹಾ ನಿರ್ದೇಶಕರು 'ವಿಂಗ್' ಪ್ರದಾನ ಮಾಡಿದರು.
ಹರಿಯಾಣದ ಮೂಲದ ಕ್ಯಾಪ್ಟನ್ ಅಭಿಲಾಷಾ ಬರಾಕ್, 2018 ರಲ್ಲಿ ಆರ್ಮಿ ಏರ್ ಡಿಫೆನ್ಸ್ ಕಾರ್ಪ್ಸ್ಗೆ ನೇಮಕಗೊಂಡಿದ್ದರು. ನಿವೃತ್ತ ಕರ್ನಲ್ ಎಸ್. ಓಂಸಿಂಗ್ ಅವರ ಪುತ್ರಿಯಾದ ಅವರು ಆರ್ಮಿ ಏವಿಯೇಷನ್ ಕಾರ್ಪ್ಸ್ ಸೇರುವ ಮೊದಲು ಹಲವಾರು ವೃತ್ತಿಪರ ಮಿಲಿಟರಿ ಕೋರ್ಸ್‌ಗಳನ್ನು ಪೂರೈಸಿದ್ದಾರೆ.
ಇದನ್ನೂ ಓದಿ:ಪೇಟಿಎಂ ಖಾತೆಯನ್ನೇ ಹೊಂದಿಲ್ಲ: ಆದರೂ ಪೇಟಿಎಂ ಮೂಲಕವೇ 20 ಸಾವಿರ ರೂ. ಕಳೆದುಕೊಂಡ!